ಉದಯವಾಹಿನಿ, ವಾಷಿಂಗ್ಟನ್ : ಭಾರತ -ಅಮೇರಿಕಾ ನಡುವೆ ಉತ್ತಮ ಬಾಂದವ್ಯ ಹೊಂದಿದೆ. ಈ ಹಿನ್ನೆಲೆಯಲ್ಲಿ ಬಲಿಷ್ಠ ರಕ್ಷಣಾ ಪಾಲುದಾರಿಕೆ ಮುಂದುವರಿಸಲು ಅಮೇರಿಕಾ ಸಿದ್ಧವಿದೆ ಎಂದು ಪೆಂಟಗನ್ ಹೇಳಿದೆ.
“ಭಾರತದೊಂದಿಗಿನ ನಮ್ಮ ಸಂಬಂಧ ರಕ್ಷಣಾ ಮಟ್ಟದಲ್ಲಿ ಉತ್ತಮ ಮಟ್ಟದಲ್ಲಿ ಅತ್ಯುತ್ತಮವಾಗಿದೆ. ಇದಕ್ಕಾಗಿ ಭಾರತವನ್ನು ನಾವು ಅಭಿನಂಧಿಸುತ್ತೇವೆ. ಭಾರತದೊಂದಿಗೆ ಬಲವಾದ ರಕ್ಷಣಾ ಪಾಲುದಾರಿಕೆ ಮುಂದುವರಿಸುತ್ತೇವೆ ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಪ್ಯಾಟ್ರಿಕ್ ರೈಡರ್ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಭಾರತದೊಂದಿಗೆ ಮುಂದೆ ಹೋಗುವುದನ್ನು ಎದುರು ನೋಡುತ್ತೇವೆ.
೧೯೯೭ ರಲ್ಲಿ, ಭಾರತ ಮತ್ತು ಅಮೇರಿಕಾ ನಡುವಿನ ರಕ್ಷಣಾ ವ್ಯಾಪಾರ ಬಹುತೇಕ ನಗಣ್ಯವಾಗಿತ್ತು, ಇಂದು ಅದು ೨೦ ಶತಕೋಟಿ ಡಾಲರ್‌ಗಿಂತ ಹೆಚ್ಚಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ರೈಡರ್, ರಕ್ಷಣಾ ಇಲಾಖೆಗೆ ಚೀನಾ ಎದುರಿಸುವ ಸವಾಲು” ಆಗಿ ಉಳಿದಿದೆ.ಗಡಿ ವಿಷಯ ಸೇರಿದಂತೆ ಕೆಲವು ಸಮಸ್ಯೆಗಳಿಗೆ ಆಯಾ ದೇಶಗಳು ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಮೂರನೇ ದೇಶದ ಪಾಲುದಾರಿಕೆ ಬಗ್ಗೆ ಮನವಿ ಮಾಡಿದರೆ ಅಂತಹ ಸಮಯದಲ್ಲಿ ಮಧ್ಯ ಪ್ರವೇಶಿಸಬಹುದೇ ಹೊರತು ತಾವಾಗಿಯೇ ಮಧ್ಯ ಪ್ರವೇಶ ಮಾಡುವುದಿಲ್ಲ ಅದು ಸಮಂಜಸವೂ ಅಲ್ಲ ಎಂದು ಹೇಳಿದ್ದಾರೆ. ವೈಯಕ್ತಿಕ ರಾಷ್ಟ್ರಗಳ ಸಾರ್ವಭೌಮತ್ವವನ್ನು ಸಂರಕ್ಷಿಸಲು ಮತ್ತು ಹಲವು ವರ್ಷಗಳಿಂದ ಶಾಂತಿ ಮತ್ತು ಸ್ಥಿರತೆ ಕಾಪಾಡಿರುವ ಅಂತರಾಷ್ಟ್ರೀಯ ನಿಯಮಗಳ ಆಧಾರಿತ ಆದೇಶಕ್ಕೆ ಬದ್ಧವಾಗಿರುವಾಗ ಭಾರತ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ಇತರ ದೇಶಗಳೊಂದಿಗೆ ಹೊಂದಿರುವ ಪಾಲುದಾರಿಕೆ ಮುಂದುವರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!