
ಉದಯವಾಹಿನಿ ಸಿಂಧನೂರು: ಬಸನಗೌಡ ಬಾದರ್ಲಿ ಪ್ರಧಾನ ಕಾರ್ಯದರ್ಶಿಗಳು ಕೆಪಿಸಿಸಿ ಇವರ ಶಿಫಾರಸ್ಸಿನ ಮೇರೆಗೆ ಸಿಂಧನೂರು ಗ್ರಾಮೀಣ ಬ್ಲಾಕ್ ಅಸಂಘಟಿತ ಕಾರ್ಮಿಕ ಮತ್ತು ನೌಕರರ (ಕೆ.ಕೆ.ಸಿ)ವಿಭಾಗದ ಅಧ್ಯಕ್ಷರನ್ನಾಗಿ ಪಕೀರಪ್ಪ ರಾಮತ್ನಾಳ ಇವರನ್ನು ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷರಾದ ಶ್ರೀ JS ಮಂಜುನಾಥ್ ನೇಮಕ ಮಾಡಿ ಆದೇಶಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ನಮ್ಮ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳು ಎಲ್ಲರೂ ಪಾಲಿಸಬೇಕು ಮತ್ತು ಪಕ್ಷದ ಸಂಘಟನೆಗೆ ಅತಿ ಹೆಚ್ಚು ಒತ್ತು ನೀಡಬೇಕು. ಪಕ್ಷಕ್ಕಾಗಿ ದುಡಿಯುವ ಬೇಕು ಆಗ ಎಲ್ಲ ರೀತಿಯಲ್ಲಿ ಸ್ಥಾನಮಾನ ಸಿಗಲಿಕ್ಕೆ ಸಾಧ್ಯ ಎಂದು ಮಾತನಾಡಿದರು.ಈ ಸಂದರ್ಭದಲ್ಲಿ. ಶಿವಕುಮಾರ ಜವಳಿ ಅಧ್ಯಕ್ಷರು ಸಿಂಧನೂರು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ, ವೆಂಕಟೇಶ್ ರಾಗಲಪರ್ವಿ ಪ್ರಧಾನ ಕಾರ್ಯದರ್ಶಿಗಳು ಕೆಪಿಸಿಸಿ ST ಘಟಕ, ಯಂಕನಗೌಡ ಗಿಣಿವಾರ ಉಪ ಅಧ್ಯಕ್ಷರು ಸಿಂಧನೂರು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ, ಮಲ್ಲಯ್ಯ ಮ್ಯಕಲ್ ಗೊನ್ವರ, ನಾನಿ ರೆಡ್ಡಿ, ಹುಸೇನ್ ಬಾಷಾ ಬಳಗಾನೂರ, ನಾಗರಾಜ್ ಮಾಡಸಿರವಾರ, ಪಂಪಾಪತಿ ತಿಮ್ಮಾಪುರ ಹಾಗೂ ಇತರರು ಇದ್ದರು.
