
ಉದಯವಾಹಿನಿ ಸಿಂಧನೂರು: ಸಿಪಿಐ(ಎಂಎಲ್ ) ರೆಡ್ ಸ್ಟಾರ್ .ಕರ್ನಾಟಕ ರೈತ ಸಂಘ-AIKKS ತಾಲೂಕು ಸಮಿತಿ ಸಿಂಧನೂರು ವತಿಯಿಂದ. ಭೂ ಮಂಜುರಾತಿಗಾಗಿ, 2ನೇ ದಿನದಲ್ಲಿ ಆಹೋ ರಾತ್ರಿ ಭೂ ಧರಣಿ! ಧರಣಿ ನಿರತರ ಆರೋಗ್ಯದಲ್ಲಿ ಏರುಪೇರು ! ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದರು ನಂತರ ಮಾತನಾಡಿದ ರಾಜ್ಯ ಸಂಚಾಲಕ ಎಂ ಗಂಗಾಧರ್ ಅವರ ಸಿಪಿಐ(ಎಂಎಲ್)ರೆಡ್ ಸ್ಟಾರ್ ಹಾಗೂ ಕರ್ನಾಟಕ ರೈತ ಸಂಘ-AIKKS ಜಂಟಿ ನೇತೃತ್ವದಲ್ಲಿ ಸರಕಾರಿ ಸರ್ವೆ ನಂ. 419 ಹಾಗೂ 186 ಜಮೀನಿನಲ್ಲಿ. ಕರ್ನಾಟಕ ರೈತ ಸಂಘದಿಂದ ಭೂಹೀನರಿಗೆ ಭೂ ಮಂಜೂರಾತಿಗಾಗಿ ಆಗ್ರಹಿಸಿ ! ಹಾಗೆಯೇ ಜಿಲ್ಲಾಧಿಕಾರಿಗಳು ಧರಣಿ ಸ್ಥಳಕ್ಕೆ ಬರಲೇಬೇಕೆಂದು ನಮ್ಮ ಹೋರಾಟದ ಒತ್ತಾಯವಾಗಿದೆ. ಹಾಗೆಯೇ ಧರಣಿ ನಿರತ ಶಾಂತಮ್ಮ ಎಂಬುವವರ ಮಹಿಳೆಯ ಆರೋಗ್ಯದಲ್ಲಿ ಏರುಪೇರಾಗಿರುವುದರಿಂದ 108 ಅಂಬ್ಯುಲೆನ್ಸ್ ನಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ದಾಖಲೆ ಮಾಡಲಾಗಿದೆ. ಮತ್ತು ರೈತ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲಯ್ಯ ಕಟ್ಟಿಮನಿಯವರ ಆರೋಗ್ಯದಲ್ಲಿ ಏರುಪೇರಾಗಿದ್ದು. ಆರ್.ಹೆಚ್.ನಂ.2 ಸರಕಾರಿ ಆಸ್ಪತ್ರೆಯ ಡಾ ಕಲ್ಮೇಶ್ ಅವರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಇನ್ನೂ ಅನೇಕ ಜನರ ಆರೋಗ್ಯ ಹದಗೆಡುವ ಸಾದ್ಯತೆಗಳು ಇದ್ದು ಜಿಲ್ಲಾಡಳಿತ ಜನರಿಗೆ ಭೂ ಮಂಜೂರಾತಿಯನ್ನು ಕೂಡಲೆ ನೀಡಬೇಕೆಂದು ಆಗ್ರಹವಾಗಿದೆ. ಆಹೋರಾತ್ರಿ ಧರಣಿ ಹೋರಾಟದಲ್ಲಿ, ಎಂ.ಗಂಗಾಧರ, ಜಿ.ಅಮರೇಶ, ಮಲ್ಲಯ್ಯ ಕಟ್ಟಿಮನಿ, ಸಂತೋಷ ಹಿರೇದಿನ್ನಿ, ಯಲ್ಲಪ್ಪ ಉಟಕನೂರು, ಅಜೀಜ್ ಜಾಗೀರದಾರ, ಪ್ರಕಾಶ, ಶೇಖರಪ್ಪ, ಮಾರುತಿ ಜಿನ್ನಾಪೂರ, ಅಂಬಮ್ಮ ಬಸಾಪೂರ, ಮಾಬುಸಾಬ ಬೆಳ್ಳಟ್ಟಿ, ಹಂಪಮ್ಮ, ಉಷಾ, ರೇಣುಕಾ, ಭೀಬಿ ಪಾತಿಮಾ, ಜುಲೇಖಬೇಗಂ, ಸುಮಂಗಲಾ, ಲಕ್ಷ್ಮೀ, ಉಷಾ, ಆದೇಶ ನಗನೂರು, ಹುಲುಗಪ್ಪ, ಮುದಿಯಪ್ಪ, ಹೆಚ್.ಆರ್.ಹೊಸಮನಿ, ಭಾಷಾ, ರಾಮಕೃಷ್ಣ, ರುಕ್ಮಿಣೇಮ್ಮಾ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

