
ಉದಯವಾಹಿನಿ ಬಂಗಾರಪೇಟೆ: ಒಂದೆಡೆ ಅನ್ನ ಭಾಗ್ಯ ಯೋಜನೆ ಯಡಿ ಅಕ್ಕಿ ವಿತರಣೆಯಲ್ಲಿ ಗೊಂದಲ ಸೃಷ್ಟಿಯಾಗಿದ್ದರೆ. ಇನ್ನೊಂದಡೆ ಪಡಿತರ ಅಕ್ಕಿಯು ಕಾಳ ಸಂತೆಯಲ್ಲಿ ಎಗ್ಗಿಲ್ಲದೆ ಬಂಗಾರಪೇಟೆ ತಾಲ್ಲೂಕು ಕಾಮಸಮುದ್ರ ಹೋಬಳಿ ತೋಪ್ಪನಹಳ್ಳಿ ಗ್ರಾಮದ ಗಣೇಶ್ ಎಂಬವರು ನಾನಾ ಮೂಲದಿಂದ ಅಕ್ರಮ ಪಡಿತರ ಅಕ್ಕಿಯನ್ನು ಉಗ್ರಣದಲ್ಲಿ ಸ್ಟಾಕ್ ಮಾಡಿ ನಂತರ ಪ್ರಮುಖ ಮಿಲ್ಲುಗಳಿಗೆ ಮಾರಾಟ ಮಾಡುವ ದೊಡ್ಡ ದಂಧೆ ತೋಪ್ಪನಹಳ್ಳಿ ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಿದೆ ಆದರೂ ಸಂಬಂಧಪಟ್ಟ ಅಧಿಕಾರಿಗಳು ಆಗಲಿ ರಾಜ್ಯ ಸರ್ಕಾರ ಆಗಲಿ ನಿಯಂತ್ರ ಮಾಡದೆ ಇರುವುದು ವಿಪರ್ಯಾಸ. ಆದರೂ ಇಂತಹ ಒಂದು ದೊಡ್ಡ ದಂದೆ ಎಲ್ಲಾ ಅಧಿಕಾರಿಗಳ ಕಣ್ಣ ತಪ್ಪಿಸಿ ಕಾಮಸಮುದ್ರ ವ್ಯಾಪ್ತಿಯಲ್ಲಿ ನಡೆಯುತ್ತಿದೆ ಎಂದು ರೈತ ಸಂಘ ಐತಾಂಡಹಳ್ಳಿ ಮಂಜುನಾಥ್ ಆರೋಪಿಸಿದ್ದಾರೆ .ತೋಪ್ಪನಹಳ್ಳಿ ಗ್ರಾಮದ ಗಣೇಶ್ ಮಾಲೀಕತ್ವದ ಉಗ್ರಹಣದ ಮುಂಭಾಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವುದರಿಂದ ಕಾಳಸಂತೆಯ ವ್ಯವಹಾರ ಇನ್ನೂ ದೊಡ್ಡ ಪ್ರಮಾಣದಲ್ಲಿ ಪಡಿತರ ಅಕ್ಕಿ ದಂದೆ ನಡೆಯುವುದಕ್ಕೆ ದಾರಿ ಮಾಡಿ ಕೊಟ್ಟಂತಾಗಿದೆ ಎಂದರು.ಪಡಿತರ ಅಕ್ಕಿ ಪಡೆಯುವ ಕುಟುಂಬಗಳು. ಹೆಚ್ಚುವರಿಯಾಗಿ ಉಳಿಯುವ ಅಕ್ಕಿಯನ್ನು ಕೆಜಿಗೆ ಇಂತಿಷ್ಟು ಅಂತ ಮಾರಾಟ ಮಾಡುತ್ತಿದ್ದಾರೆ ಜನರಿಂದ ಅಕ್ಕಿ ಖರೀದಿಸಿ ಸರ್ಕಾರಕ್ಕೆ ಕೇಜಿಗೆ 34ರಂತೆ ಮಾರಾಟ ಮಾಡುತ್ತಿದ್ದಾರೆ. ಈ ಅಕ್ಕಿಯನ್ನು ಖರೀದಿಸುವ ಕೆಲ ಅಂದರೆ ತೋಪ್ಪನಳ್ಳಿ ಗಣೇಶ್ ಎಂಬಂತಹ ಮಧ್ಯವರ್ತಿಗಳು ಖರೀದಿಸಿ ಇನ್ನೊಬ್ಬ ರೈಸ್ ಮಿಲ್ ಮಾಲೀಕರಿಗೆ ಮಾರಾಟ ಮಾಡಿ ಅದೇ ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿ ನಾನಾ ಬ್ರಾಂಡ್ಗಳಲ್ಲಿ ತಯಾರಿಸಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಪಡಿತರ ಅಕ್ಕಿ ಮಾರಾಟ ಮಾಡುತ್ತಿದ್ದಾರೆ.ಕಾಳಸಂತೆ ನಿಯಂತ್ರಣಕ್ಕೆ ಬಾರದಷ್ಟು ವ್ಯಾಪಕವಾಗಿ ಬೆಳೆದು ನಿಂತಿದೆ ಪಡಿತರ ಅಕ್ಕಿ ದಂಧೆ ಎಂದು ದೂರಿದರು.
ಪಡಿತರ ಚೀಟಿ ಕುಟುಂಬಕ್ಕೆ ಹೆಚ್ಚಾದ ಅಕ್ಕಿಯನ್ನು ಸರ್ಕಾರವೇ ಕೇಜಿಗೆ 15ರಂತೆ ಖರೀದಿಸಿದರೆ ಕಾಳಸಂತೆಗೆ ಕಡಿವಾಣ ಹಾಕಿದಂತಾಗುತ್ತದೆ ಕೇಂದ್ರ ಸರ್ಕಾರಕ್ಕೆ 34 ರೂ ನೀಡಿ ಅಕ್ಕಿ ಖರೀದಿಸುವ ಬದಲು ಹೀಗೆ ಪಡೆದರೆ ಸರ್ಕಾರಕ್ಕೆ ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ ಗ್ರಾಮ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಹೆಚ್ಚುವರಿ ಪಡಿತರ ಅಕ್ಕಿ ಖರೀದಿ ಕೇಂದ್ರಗಳನ್ನು ಸರ್ಕಾರ ತೆರೆಯಬೇಕು ಎಂದು ಸಲಹೆ ನೀಡಿದರು
ಈ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ ಸರ್ಕಾರ ಈ ಸೂತ್ರ ಅನುಸರಿಸಬೇಕು ಎಂದು ಆಗ್ರಹಿಸಿದರು…ತಾಲ್ಲೂಕು ಕಾಮಸಮುದ್ರ ಹೋಬಳಿ ತೊಪ್ಪನಹಳ್ಳಿ ಗ್ರಾಮದಲ್ಲಿ ಇಂತಹ ಅಕ್ರಮ ಪಡಿತರ ಅಕ್ಕಿ ದಂದೆ ಸುಮಾರು ವರ್ಷಗಳಿಂದ ನಡೆಯುತ್ತಿದ್ದರು ಸಂಬಂಧಪಟ್ಟ ಅಧಿಕಾರಿಗಳು ಗಮನಕ್ಕೆ ಬಾರದೆ ಈ ತರಹ ದೊಡ್ಡ ದಂದೆ ಒಂದು ನಡೆಯುತ್ತಿದೆ ಎಂದರೆ ಇದರ ಹಿಂದಿನ ಮರ್ಮವಾದರೂ ಏನು ???
