ಉದಯವಾಹಿನಿ,ನವದೆಹಲಿ: ದೇಶದಲ್ಲಿ ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಮೂರನೇ ಅವಧಿಗೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ಚುನಾವಣಾ ಪೂರ್ಣ ಸಮೀಕ್ಷೆ ಈ ವಿಷಯ ಹೊರ ಹಾಕಿದೆ. ೫೪೩ ಲೋಕಸಭಾ ಕ್ಷೇತ್ರಗಳ ಪೈಕಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗು ಅದರ ಮಿತ್ರ ಪಕ್ಷಗಳು ೩೧೫ ಸ್ಥಾನ ಪಡೆಯಲಿದೆ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಹೇಳಿದೆ. ಕರ್ನಾಟಕದ ೨೮ ಲೋಕಸಭಾ ಸ್ಥಾನಗಳಲ್ಲಿ ೧೮ ಸ್ಥಾನಗಳನ್ನು ಎನ್‌ಡಿಎ ಗೆಲ್ಲಲಿದ್ದು ೧೦ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಗುಜರಾತ್‌ನಿಂದ ಎಲ್ಲಾ ೨೬ ಲೋಕಸಭಾ ಸ್ಥಾನ, ಮತ್ತು ಉತ್ತರಾಖಂಡದಿಂದ ಎಲ್ಲಾ ಐದು ಸ್ಥಾನಗಳನ್ನು ಸ್ವೀಪ್ ಮಾಡಲಿದೆ. ಎಂದು ಸಮೀಕ್ಷೆ ತಿಳಿಸಿದೆ.
ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟ ೧೭೨ ಲೋಕಸಭಾ ಸ್ಥಾನ ಪಡೆಯಬಹುದು ಮತ್ತು ಪ್ರಾದೇಶಿಕ ಪಕ್ಷಗಳು ಮತ್ತು ಸ್ವತಂತ್ರರು ಸೇರಿದಂತೆ ’ಇತರರು’ ೫೬ ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಆಡಳಿತಾರೂಢ ಬಿಜೆಪಿ ಬಲ ಈ ಬಾರಿ ೩೦೩ ರಿಂದ ೨೯೩ ಕ್ಕೆ ಕಡಿಮೆಯಾಗಬಹುದು ಎಂದು ಸಮೀಕ್ಷೆ ಹೇಳಿದೆ. ಮತ್ತೊಂದೆಡೆ, ೫೨ ಸ್ಥಾನಗಳನ್ನು ಹೊಂದಿರುವ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಈ ಬಾರಿ ತನ್ನ ಸಂಖ್ಯೆಯನ್ನು ೭೦ ಕ್ಕೆ ಹೆಚ್ಚಿಸಿಕೊಳ್ಳಲಿದೆ ಎಂದು ಅಂದಾಜು ಮಾಡಿದೆ.
