ಉದಯವಾಹಿನಿ,ಜೆರೆಸಲೇಂ: ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಪರಿಣಾಮ ಇಸ್ರೇಲ್‌ನಲ್ಲಿ ನಡೆದ ರಾಕೆಟ್ ದಾಳಿಯಲ್ಲಿ ೫೦೦ ಮಂದಿಗೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. “೨೦ ನಿಮಿಷಗಳ ದಾಳಿಯಲ್ಲಿ ಸುಮಾರು” ೫,೦೦೦ ರಾಕೆಟ್ ಹಾರಿಸಲಾಗಿದೆ. ಗಾಜಾದಲ್ಲಿ ೨೩೨ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಆದರೆ ಇಸ್ರೇಲ್‌ನಲ್ಲಿ ೩೦೦ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಉಗ್ರಗಾಮಿ ಗುಂಪು ಹಮಾಸ್ , ಹಠಾತ್ ದಾಳಿಯಲ್ಲಿ ೫,೦೦೦ ರಾಕೆಟ್‌ಗಳನ್ನು ಹಾರಿಸಿದ್ದರಿಂದ. ಇಸ್ರೇಲ್, ಹಮಾಸ್ ವಿರುದ್ಧ ಯುದ್ಧ ಘೋಷಿಸಿದೆ ಪರಿಣಾಮ ಸಾವು ನೋವಿಗೆ ಕಾರಣವಾಗಿದೆ. ಇಸ್ರೇಲ್ ಸರ್ಕಾರ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದು ಇದರ ಬೆನ್ನಲ್ಲೇ ವೈಮಾನಿಕ ದಾಳಿ ಪ್ರಾರಂಭಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ದೇಶ ಯುದ್ಧದಲ್ಲಿದೆ ಮತ್ತು ಹಮಾಸ್ ದಾಳಿಕೋರರಿಗೆ ತಕ್ಕ ಪಾಠ ಕಲಿಸುವುದಾಗಿ ಗುಡುಗಿದ್ದಾರೆ. “ಇಸ್ರೇಲ್ ನಾಗರಿಕರೇ, ಯುದ್ಧದಲ್ಲಿದ್ದೇವೆ. ಯುದ್ಧವನ್ನು ನಾವು ಗೆಲ್ಲುತ್ತೇವೆ ನೀವು ಭಯ ಹತಾಶರಾಗಬೇಡಿ.
