ಉದಯವಾಹಿನಿ, ನವದೆಹಲಿ: ಭಾರತ ಭೇಟಿಯಿಂದ ರಾಜಕೀಯ ಮತ್ತು ಆರ್ಥಿಕ ಅಭಿವೃದ್ಧಿಗೆ ಹೊಸ ಮಾರ್ಗಗಳ ಬಾಗಿಲು ತೆರೆಯಲಿದೆ ಎಂದು ತಾಂಜೇನಿಯಾದ ಅಧ್ಯಕ್ಷೆ ಸಾಮಿಯಾ ಸುಲುಹು ಹಸನ್ ಇಂದಿಲ್ಲಿ ಹೇಳಿದ್ದಾರೆ. ಎರಡೂ ದೇಶಗಳ ಸ್ನೇಹ ಸಂಬಂಧ ದಶಕಗಳಿಂದ ಇರುವ ಅತ್ಯುತ್ತಮ ಸಂಬಂಧಕ್ಕಾಗಿ ತಾಂಜೇನಿಯಾ, ಭಾರತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಈ ಭೇಟಿ ಮತ್ತಷ್ಟು ಸ್ನೇಹ ಸಂಬಂಧ ಸುಧಾರಣೆಗೆ ಬುನಾದಿ ಆಗಲಿದೆ ಎಂದಿದ್ದಾರೆ.
ಭಾರತ ಪ್ರವಾಸಕ್ಕೆ ಆಗಮಿಸಿರುವ ಅಧ್ಯಕ್ಷೆ ಸಾಮಿಯಾ ಸುಲುಹು ಹಸನ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಾಂಪ್ರದಾಯಕಿ ಸ್ವಾಗತ ನೀಡಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದ್ದಾರೆ.
ಬಾಂಧವ್ಯ ವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎನ್ನುವುದ ನಮ್ಮ ನಿರೀಕ್ಷೆ ಇದೆ. ನಮ್ಮ ಪೂರ್ವಜರು ಹಾಕಿಕೊಟ್ಟ ಭದ್ರ ಬುನಾಧಿ ಮತ್ತು ದ್ವಿಪಕ್ಷೀಯ ಸಂಬಂಧಗಳು ದಶಕದ ನಂತರ ದಶಕಗಳವರೆಗೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಭಾರತದೊಂದಿಗೆ ಮತ್ತಷ್ಟು ಸ್ನೇಹ ಸಂಬಂಧ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಇದರ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!