ಉದಯವಾಹಿನಿ, ಕೋಲಾರ : ವೈದ್ಯರ ಆದೇಶದ ಚೀಟಿ ಇಲ್ಲದೆ ಮತ್ತೇರಿಸುವ ಮಾತ್ರೆಗಳನ್ನು ಸಾರ್ವಜನಿಕವಾಗಿ ಅಕ್ರಮ ಮಾರಾಟದ ಧಂದೆಯನ್ನು ನಡೆಸುತ್ತಿದ್ದ ಮೆಡಿಕಲ್ ಸ್ಟೋರ್‌ಗಳ ಮೇಲೆ ಸೈಬರ್ ಕ್ರೈಂ ಪೋಲೀಸರು ಶನಿವಾರ ದಾಳಿ ನಡೆಸಿರುವ ಘಟನೆ ನಡೆದಿದೆ.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪದ ನಂಜುಂಡೇಶ್ವರ ಮೆಡಿಕಲ್ ಸ್ಟೋರ್ ಹಾಗೂ ಶ್ರೀಕಾರ್ ಮೆಡಿಕಲ್ ಸ್ಟೋರ್‌ಗಳಲ್ಲಿ ವೈದ್ಯರ ಅನುಮತಿ ಇಲ್ಲದೆ ಮತ್ತೇರಿಸುವ ಮಾತ್ರೆಗಳು, ಸೆಲ್ಯೂಶನ್‌ಗಳ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಸೈಬರ್ ಕ್ರೈಂ ಪೊಲೀಸರು ದಾಳಿ ನಡೆಸಿ ಮಾತ್ರೆಗಳನ್ನು ಹಾಗೂ ಮತ್ತೇರಿಸುವ ಸೆಲ್ಯೂಷನ್‌ಗಳನ್ನು ವಶಕ್ಕೆ ಪಡೆದರು. ಔಷದಿ ನಿಯಂತ್ರಣ ಇಲಾಖೆಯ ಅಧಿಕಾರಿ ಶ್ಯಾಮಲ ಹಾಗೂ ಸೈಬರ್ ಕ್ರೈಂ ಪೋಲೀಸರು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಇದೇ ಕೆಲ ಮಾದಕ ವ್ಯಸನಿ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಇತ್ತೀಚೆಗೆ ಚಿಂದಿ ಆಯುವಂತ ಯುವಕರು ಸದಾಕಾಲ ಬೆಳ್ಳಂಬೆಳಗ್ಗೆಯೇ ನಗರದಲ್ಲಿ ತೊರಾಡಿಕೊಂಡು ರಸ್ತೆಗಳಲ್ಲಿ ಓಡಾಡುತ್ತಿರುವುದು, ರಸ್ತೆ ಬದಿಗಳಲ್ಲಿ ಜ್ಞಾನ ಇಲ್ಲದೆ ಬಿದ್ದಿರುವುದನ್ನು ನಗರದ ಬಸ್ ನಿಲ್ದಾಣ ಸಮೀಪ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಸಾರ್ವಜನಕರು ದಾಳಿ ಸಂದರ್ಭದಲ್ಲಿ ದೂರಿದರು,
