ಉದಯವಾಹಿನಿ, ಹೊಸಪೇಟೆ : ವಿಶ್ವ ಅಂಚೆ ದಿನಾಚರಣೆಯ ಹಿನ್ನಲೆಯಲ್ಲಿ ನಗರದ ಪ್ರಧಾನ ಅಂಚೆ ಕಚೇರಿಯ ಆವರಣದಲ್ಲಿ ವಿಶ್ವ ಅಂಚೆ ದಿನಾಚರಣೆಯನ್ನು ಆಚರಿಸಲಾಯಿತು.ಅಂಚೆ ಕಚೇರಿಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಸಿಬ್ಬಂದಿ ಒಬ್ಬರಿಗೊಬ್ಬರು ಶುಭಾಶಯ ವಿನಮಯ ಮಾಡಿಕೊಂಡರು. ಪೆÇೀಸ್ಟ್ ಮಾಸ್ಟರ್ ರಶೀದ್ ಸಾಹೇಬ್ ಅವರು ಮಾತನಾಡಿ ಈ ದಿನ ವಿಶ್ವ ಅಂಚೆ ದಿನವನ್ನು ದೇಶದ ಎಲ್ಲಾ ಅಂಚೆ ಕಚೇರಿಗಳಲ್ಲಿ ಆಚರಿಸಲಾಗುತ್ತದೆ ಎಂದು ಹೇಳಿದರು.
ವಿಶ್ವ ಅಂಚೆ ದಿನವನ್ನು 1874 ರಲ್ಲಿ UPU UNIVERSAL POSTAL UNION ರಚಿಸಿದರು ಇದರ ಉದ್ದೇಶ ಗ್ರಾಹಕರಲ್ಲಿ ಅಂಚೆ ಸೇವೆ ಹಾಗೂ ಉಪಯೋಗದ ಮಹತ್ವವನ್ನು ಹೇಳಿದರು.
ಮಾರುಕಟ್ಟೆ ಅಧಿಕಾರಿ ವಿ.ಎಸ್.ಕೃಷ್ಣ ಮಾತನಾಡಿ ಪ್ರತಿ ವರ್ಷ ಆಕ್ಟೊಬರ್ 9 ರಂದು ವಿಶ್ವ ಅಂಚೆ ದಿನವನ್ನು ಆಚರಿಸುತ್ತೇವೆ ಹಾಗೂ 10 ರಂದು ರಾಷ್ಟ್ರೀಯ ಅಂಚೆ ದಿನವನ್ನು ಭಾರತದಲ್ಲಿ ಆಚರಣೆ ಮಾಡುತ್ತೆವೆ ಎಂದು ಹೇಳಿದರು. ಅಂಚೆ ಪಿನ್ ಕೋಡ್‍ಗಳು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ವಿವರಣೆ ಮಾಡಿದರು. ಒಟ್ಟು 6 ಸಂಖ್ಯೆಯ ಪಿನ್ ಕೋಡ್‍ನಲ್ಲಿ ಮೊದಲೇ ಸಂಖ್ಯೆ ಪ್ರದೇಶ 2ನೇ ಸಂಖ್ಯೆ ಉಪ ಪ್ರದೇಶ 3ನೆ ಸಂಖ್ಯೆ ಜಿಲ್ಲೆ ಹಾಗೂ ಉಳಿದ 4 ತಾಲೂಕು 5 ಮತ್ತು 6 ಆ ಪ್ರದೇಶ ಅಂಚೆ ಕಚೇರಿ ನಂಬರ್ ಆಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಅಂಚೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
