ಉದಯವಾಹಿನಿ, ಸಿಂಧನೂರು: ನಗರದಲ್ಲಿನ ಕೇಂದ್ರ ಬಸ್ ನಿಲ್ದಾಣ ಪ್ರಯಾಣಿಕರಿಗೆ ಸುಖ ಸಂಚಾರದ ತಾಣವಾಗಿಲ್ಲ , ಬದಲಿಗೆ ದುರ್ವಾಸನೆಯ ತಾಣವಾಗಿ ಹಾಗೂ ಹಲವಾರು ಮೂಲಭೂತ ಸೌಕರ್ಯಗಳ ಕೊರತೆಯ ಆಗರವಾಗಿ ನಿಂತಿದೆ.ಸಿಂಧನೂರಿನ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಗುಟ್ಕಾ ತಿಂದು ಉಗುಳಿದ ಕಲೆಗಳು, ಬಿಡಾಡಿ ದನಕರುಗಳು, ನಾಯಿಗಳು, ಕತ್ತೆಗಳು ಯಾವಾಗ ಅಂದರೆ ಆವಾಗ ಪ್ರತ್ಯಕ್ಷವಾಗಿರುತ್ತವೆ. ಸ್ವಚ್ಛತೆಯಂತೂ ಹೇಳತಿರದು ಅದು ಮಾಯವಾಗಿದೆ. ಬಸ್ ನಿಲ್ದಾಣದಲ್ಲಿ ಯಾವುದೇ ಸ್ಥಳದಲ್ಲಿ ನಿಂತರು ಕೂಡ ದುರ್ವಾಸನೆ ಮೂಗು ಮುಚ್ಚಿಕೊಂಡು ಕೊಡಬೇಕು.
ಶಿವಮೊಗ್ಗ-ಹೈದ್ರಾಬಾದ್ ಮಾರ್ಗ ಬಸ್ ರದ್ದು: ಸಿಂಧನೂರು ಡಿಪೋ ಬಸ್ ಸುಮಾರು (ನಲವತ್ತು) ವರ್ಷಗಳಿಂದ ಶಿವಮೊಗ್ಗ-ಹೈದ್ರಾಬಾದ್ ಮಾರ್ಗವಾಗಿ ರಾತ್ರಿ ೧೧-೩೦ ರ ಸುಮಾರಿಗೆ (ಸಿಂಧನೂರು ತಲುಪುತ್ತಿತ್ತು)ಓಡಾಡುತ್ತಿದ್ದ ಬಸ್ ಇಂದು ರದ್ದುಗೊಳಿಸಲಾಗಿದೆ. ದೂರದ ಪ್ರಯಾಣಿಕರಿಗೆ ಈ ಬಸ್ ತುಂಬಾ ಅನುಕೂಲವಾಗಿತ್ತು ಈ ಬಸ್‌ನ್ನು ರದ್ದುಗೊಳಿಸಿದ್ದು ಹಲವರಿಗೆ ಅನಾನುಕೂಲ ವಾಗಿದೆ ಇದನ್ನು ಅಧಿಕಾರಿಗಳು ತಮ್ಮ ಅನೂಕೂಲಕ್ಕೆ ಈ ಬಸ್ ರದ್ದು ಮಾಡಿದ್ದಾರೆಂದು ತಮ್ಮ ಕಷ್ಟವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡರು.
ಬಸ್ ನಿಲ್ದಾಣ ಮೂಲಭೂತ ಸಮಸ್ಯೆಗಳ ಆಗರ: ಸಿಂಧನೂರಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಶುದ್ದ ಕುಡಿಯುವ ನೀರಿಲ್ಲ ,ಶೌಚಾಲಯದ ಬಳಕೆಗೆ ನಿಗದಿಗೊಳಿಸಿದ ಹಣಕ್ಕಿಂತ ಹೆಚ್ಚಿನ ಹಣ ವಸೂಲಿ, ರಾತ್ರಿ ಸಮಯದಲ್ಲಿ ಒಂದೆಡೆ ಕತ್ತಲು, ಇನ್ನೊಂದೆಡೆ ಬೆಳಕು, ಎಲ್ಲೆಂದರಲ್ಲಿ ಬಿಕ್ಷಾಟನೆ, ಪರ್ಸ್, ಮೊಬೈಲ್ ಕಳ್ಳತನ, ಹಿಂದೆ ಮುಂದೆ ಗೊತ್ತಿಲ್ಲದ ಅನಾಮಿಕ ವ್ಯಕ್ತಿಗಳ ಸಾವು, ವಿಲೇವಾರಿ ಆಗದ ಕಸ, ಚರಂಡಿಗಳಲ್ಲಿ ವಿಪರೀತ ಸೊಳ್ಳೆ ,ದುರ್ವಾಸನೆ ಸರ್ವೆ ಸಾಮಾನ್ಯ ಮತ್ತು ಐದು-ಹತ್ತು ದಿನಗಳಿಗೊಮ್ಮೆ ಗ್ರಾಮೀಣ ಭಾಗಗಳಿಗೆ ಬಸ್ ಇಲ್ಲ ಎಂದು ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಡಿಪೋ ಅಧಿಕಾರಿಗಳಿಗೆ (ಡಿ.ಎಮ್.ಒ) ಅವರಿಗೆ ಮನವಿಪತ್ರ ಸಲ್ಲಿಸುವುದು ಕಾಣುತ್ತೆವೆ.
