ಉದಯವಾಹಿನಿ, ಮುಂಬೈ: ಅ.೧೧ ಭಾರತೀಯ ಚಿತ್ರರಂಗದ ದಿಗ್ಗಜರಿಗೆ ಬಹಳ ವಿಶೇಷವಾದ ದಿನವಾಗಿತ್ತು. ಅಮಿತಾಭ್ ಬಚ್ಚನ್ ಹುಟ್ಟಿದ ದಿನವೇ ಅಂದರೆ ಅಕ್ಟೋಬರ್ ೧೧,೧೯೬೬ ರಂದು ಸಾಯಿರಾ ಬಾನು ಮತ್ತು ದಿಲೀಪ್ ಕುಮಾರ್ ಮದುವೆಯಾದರು. ಅಕ್ಟೋಬರ್ ೧೧, ೨೦೨೩ ರಂದು, ಸಾಯಿರಾ ಮತ್ತು ದಿಲೀಪ್ ಕುಮಾರ್ ದಾಂಪತ್ಯ ಜೀವನಕ್ಕೆ ೫೭ ವರ್ಷ. ತಮ್ಮ ೫೭ನೇ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾಯಿರಾ ದಿಲೀಪ್ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿ ಭಾವುಕರಾದರು. ದಿಲೀಪ್ ಕುಮಾರ್ ಅವರು ೨೦೨೧ ರಲ್ಲಿ ನಮ್ಮನ್ನು ಅಗಲಿದ್ದಾರೆ .
ತನ್ನ ೫೭ ನೇ ವಿವಾಹ ವಾರ್ಷಿಕೋತ್ಸವದಂದು, ಸಾಯಿರಾ ಬಾನು ದಿಲೀಪ್ ಕುಮಾರ್ ಅವರೊಂದಿಗಿನ ಮದುವೆಯ ಯಾರು ನೋಡದ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ದೇವ್ ಆನಂದ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಭಾವುಕರಾದ ಸಾಯಿರಾ ಬಾನು ತಮ್ಮ ಪ್ರೇಮಕಥೆ ನಿಜವಾದ ಸಿಂಡ್ರೆಲಾ ಕಥೆಯಾಗಿದ್ದು, ದಿಲೀಪ್ ಕುಮಾರ್ ಅವರೊಂದಿಗಿನ ವಿವಾಹವು ಕನಸು ನನಸಾಗಿದೆ ಎಂದು ಬರೆದಿದ್ದಾರೆ.
೨೦೨೧ ರಲ್ಲಿ ದಿಲೀಪ್ ಕುಮಾರ್ ನಿಧನದ ನಂತರ ಸಾಯಿರಾ ಬಾನು ಇನ್ಸ್ಟಾಗ್ರಾಮ್ನಲ್ಲಿ ಖಾತೆಯನ್ನು ರಚಿಸಿದ್ದರು ಇಲ್ಲಿ ಅವರು ದಿಲೀಪ್ ಕುಮಾರ್ ಮತ್ತು ಅವರ ಜೀವನಕ್ಕೆ ಸಂಬಂಧಿಸಿದ ಕಥೆಗಳು ಮತ್ತು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
