ಉದಯವಾಹಿನಿ, ಹೈದರಾಬಾದ್ಅ: ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಜೊತೆ ಕೆಲಸ ಮಾಡಬೇಕೆಂಬುದು ಎಲ್ಲ ಭಾಷೆಗಳ ನಟರ ಆಸೆ. ಆದರೆ ಆ ಅವಕಾಶವು ಕೆಲವೇ ಜನರಿಗೆ ದೊರೆಯುತ್ತದೆ. ಅಂತಹ ಅದೃಷ್ಟವಂತ ನಟರಲ್ಲಿ ಪ್ರಭಾಸ್ ಕೂಡಾ ಒಬ್ಬರು.ಇಲ್ಲಿಯವರೆಗೆ, ಅಮಿತಾಬ್ ಪೂರ್ಣ ಪ್ರಮಾಣದಲ್ಲಿ ನಟಿಸಿದ ಏಕೈಕ ತೆಲುಗು ಚಿತ್ರ ಸೈರಾ ನರಸಿಂಹ ರೆಡ್ಡಿ. ಈ ಸಿನಿಮಾದಲ್ಲಿ ನರಸಿಂಹ ರೆಡ್ಡಿ ಗುರುವಾಗಿ ಅಮಿತಾಬ್ ಕಾಣಿಸಿಕೊಂಡಿದ್ದರು. ಈಗ ಮತ್ತೆ ಕಲ್ಕಿ ೨೮೯೮ ಎಡಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ, ಅಮಿತಾಬ್ ರೆಬೆಲ್ ಸ್ಟಾರ್ ಪ್ರಭಾಸ್ ಜೊತೆ ನಟಿಸುತ್ತಿರುವುದು ಇದೇ ಮೊದಲು. ಹೀಗಾಗಿ ತಮ್ಮ ಕನಸು ನನಸಾಗಿದೆ ಎನ್ನುತ್ತಾರೆ ಪ್ರಭಾಸ್.
ನಿನ್ನ ಬಿಗ್ ಬಿ ಅಮಿತಾಬ್ ಬಚ್ಚನ್ ಹುಟ್ಟುಹಬ್ಬ. ಅವರು ೮೧ ನೇ ವರ್ಷಕ್ಕೆ ಕಾಲಿಟ್ಟರು. ಅಮಿತಾಬ್ ಹುಟ್ಟುಹಬ್ಬದ ಅಂಗವಾಗಿ ’ಕಲ್ಕಿ’ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಪೋಸ್ಟರ್ ಮೂಲಕ ಅಮಿತಾಬ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಈ ಪೋಸ್ಟರ್ ನಲ್ಲಿ ಅಮಿತಾಬ್ ಲುಕ್ ಎಲ್ಲರನ್ನೂ ಸೆಳೆಯುತ್ತಿದೆ. ಏಕೆಂದರೆ ಅದು ಸಂತನ ನೋಟ. ಗುಹೆಯಲ್ಲಿ ಸೂರ್ಯನ ಕಿರಣಗಳ ಮಧ್ಯದಲ್ಲಿ ಬಿಗ್ ಬಿ ಕೈಯಲ್ಲಿ ಕೋಲು ಹಿಡಿದು ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಂತೆ ನಿಂತಿದ್ದಾರೆ.ಆ ಆಕಾರ ತುಂಬಾ ಆಕರ್ಷಕವಾಗಿದೆ. ಆಧ್ಯಾತ್ಮಿಕತೆ ಮೆರುಗು ನೀಡುತ್ತದೆ.
ಇದೇ ಪೋಸ್ಟರ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿರುವ ಪ್ರಭಾಸ್, ಅಮಿತಾಬ್ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ. ತಲೆಮಾರುಗಳಿಗೆ ಸ್ಫೂರ್ತಿ ನೀಡಿದ ನಟನೊಂದಿಗೆ ಕೆಲಸ ಮಾಡುವುದು ಒಂದು ಆಶೀರ್ವಾದ. ಕನಸು ನನಸಾಗುವುದು ಎಂದರೆ ಇದೇ. ಹುಟ್ಟುಹಬ್ಬದ ಶುಭಾಶಯಗಳು ಸರ್’ ಎಂದು ಪ್ರಭಾಸ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೇಳಿದ್ದಾರೆ.
