
ಉದಯವಾಹಿನಿ ಯಾದಗಿರಿ : ಗ್ರಾಮೀಣ ಪ್ರದೇಶಗಳಲ್ಲಿ ರೈತರು ತಮ್ಮ ಕೃಷಿ ಕಾಯಕಗಳನ್ನು ಮಾಡಲು, ಎತ್ತುಗಳನ್ನು ಬಳಸಿಕೋಳ್ಳುತ್ತಾರೆ, ಈ ಹಿಂದಿನ ಕಾಲದಲ್ಲಿಯಂತೂ ಕೃಷಿ ಕಾರ್ಯಗಳಿಗೆ ಎತ್ತುಗಳ ಅವಶ್ಯಕತೆ ಬಹಳ ಇತ್ತು, ಆದರೆ ಇಂದು ಯಂತ್ರೋಪಕರಣಗಳ ಬಳಕೆಯಿಂದ ಮೂಲ ವ್ಯವಸಾಯದ ಉಪಕರಣಗಳು ಮೂಲೆ ಹಿಡಿದಿವೆ ಎಂದರೆ ತಪ್ಪಾಗಲಾರದು. ಅದರಂತೆಯೇ ವ್ಯವಸಾಯದಲ್ಲಿ ದಿನೆ ದಿನೆ, ಟ್ಯಾಕ್ಟರ್ ದಂತಹ ಯಂತ್ರೋಪಕರಣಗಳು ಬಂದಿವೆ, ಆದರಿಂದ ರೈತರು ಈ ಹಿಂದಿನ ಕೃಷಿ ಕಾಯಕಗಳನ್ನು ವಿಭಿನ್ನವಾದ ರೀತಿಯಲ್ಲಿ ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದಾರೆ, ಮತ್ತು ಇಂದಿನ ದಿನಗಳಲ್ಲಿ ಎತ್ತುಗಳನ್ನು ರೈತರು ಸಾಕುವದು ಅಪರೂಪವಾಗಿದೆ. ಆದರು ಕೆಲವು ಬಾಗಗಳಲ್ಲಿ ಎತ್ತುಗಳನ್ನು ಕ್ರೀಡೆಗಾಗಿ ಬಳಸುತ್ತಿದ್ದಾರೆ, ಅದರಂತಯೇ ಇಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ ರೈತರಾದ ರಾಮನಗೌಡ ಹಿರೆಗೌಡ್ರು ಎಂಬ ರೈತನ ಜೀವನ ಎಂದು ಕರೆಯುವ ಜೋಡು ಎತ್ತುಗಳನ್ನು ಮತ್ತು ಇಬ್ಬರು ರೈತರಾದ ಬುಡ್ಡೆ ಸಾಬ್ ಎಂಬವನ ಜೊತೆಗೂಡಿ ಸುಮಾರು 21ರಿಂದ 22 ಎಕರೆ ಹತ್ತಿ ಮತ್ತು ತೊಗರಿ ಹೊಲದಲ್ಲಿ ಹರಗುವದರ (ಕುಂಟೆ ಹೊಡೆದು) ಮುಖಾಂತರ ಹೊಸ ದಾಖಲೆಯನ್ನು ಮಾಡುವುದ್ದಾರೆ, ಎರಡು ಎತ್ತುಗಳನ್ನು ಜೊತೆಗೂಡಿ ನಾವು ಯಾವುದೇ ಟ್ರ್ಯಾಕ್ಟರ್ ಗಳಿಗೆ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ ರೈತರು.
ಉದಯವಾಹಿನಿ ಹೈಲೆಟ್ಸ್ :
*ಯಾದಗಿರಿಯಲ್ಲಿ ಸಾದನೆ ಮಾಡಿದ ಜೋಡೆತ್ತುಗಳು.
*ಯಂತ್ರೋಪಕರಣಗಳಿಗಿಂತ ಹೆಚ್ಚು ಕೆಲಸ ಮಾಡಿದ ರೈತಮೀತ್ರ.
*ಕೃಷಿಯ ಆಧುನಿಕತೆಯ ನಡುವೆ ತಮ್ಮ ಚಾಪು ಉಳಿಸಿಕೊಂಡ ಜಾನುವಾರುಗಳು.
*ಸತತ 10 ಗಂಟೆಯಲ್ಲಿ 22 ಎಕರೆ ಹೊಲದಲ್ಲಿ ಕುಂಟೆ ಹೊಡೆದು ಸಾದನೆ ಮಾಡಿದ ಎತ್ತುಗಳು.
*ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ.
*ಟ್ರಾಕ್ಟರನಿಂದ ದಿನಪೂರ್ತಿ ಮಾಡಬಹುದಾದ ಕೆಲಸ ಈ ಜೊಡೆತ್ತುಗಳು ಮಾಡಿವೆ.
*ಸುತ್ತಮುತ್ತಲಿನ ಗ್ರಾಮಸ್ಥರು ನೆರೆದು ಶಹಬ್ಬಾಶ ಎನ್ನುತ್ತಿದ್ದಾರೆ.
ಇಂದು ಯಂತ್ರಫಕರಣಗಳ ಅಟ್ಟಹಾಸದಲ್ಲಿ ರೈತರ ಸಾಕಿದ ಎರಡು ಎತ್ತುಗಳು ದಾಖಲೆ ಮಾಡಿರುವದ ಗ್ರಾಮೀಣ ಪ್ರದೇಶದಲ್ಲಿ ಹುಬ್ಬೇರಿಸುವಂತೆ ಮಾಡಿದೆ ಎನ್ನುತ್ತಾರೆ ಅನೇಕ ರೈತಮಿತ್ರರು.ಇದರಿಂದಾಗಿ ಎತ್ತುಗಳ ಮಾಲಿಕರ ಮುಖದಲ್ಲಿ ಎಲ್ಲೋ ಇಲ್ಲದ ಮಂದಹಾಸ ಉಕ್ಕಿಬಂದಿದೆ.ಈ ಮೊದಲು ಗ್ರಾಮೀಣ ಪ್ರದೇಶಗಳಲ್ಲಿ ಹಿಂದಿನ ಕಾಲದಲ್ಲಿ ರೈತರು ಎತ್ತುಗಳ ಮುಖಾಂತರವೇ ತಮ್ಮ ದಿನನಿತ್ಯದ ಕಾಯಗಳನ್ನು ಪೂರೈಸಿಕೋಳ್ಳುತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.ಸಂದರ್ಭದಲ್ಲಿ ಹಳ್ಳಿಯ ಸಂಪ್ರದಾಯದಂತೆ ಅಲ್ಲಿಗೆ ಮತ್ತು ರಂಗು ರಂಗಿನ ಬಣ್ಣದೊಂದಿಗೆ ಎರಡು ಎತ್ತುಗಳನ್ನು ಬರವಣಿಗೆ ಮಾಡುವುದರ ಮುಖಾಂತರ ಹರ್ಷ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ರೈತರಾದ ಸಂಗನಗೌಡ ಬಸನಗೌಡ ಹೊಸಮನಿ ಮುತ್ತು ಗೌಡ ಮಲ್ಲು ಸಜ್ಜನ್ ಹಾಗೂ ಅನೇಕ ಗ್ರಾಮಸ್ಥರು ಕೃಷಿಯಲ್ಲಿ ಭಾಗಿಯಾದರು.
“ಈ ತಂತ್ರಜ್ಞಾನ ಯುಗದಲ್ಲಿ, ಯಂತ್ರಪಕರಣಗಳಿಗಿಂತ ಕಡಿಮೆ ಇಲ್ಲವೆಂದು ಸಾಬೀತು ಪಡಿಸಿದ ಜೋಡೆತ್ತುಗಳು, ಸರ್ಕಾರ ಇಂತಹ ರೈತರಿಗೆ ಮತ್ತು ಈ ಜೋಡೆತ್ತುಗಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ಇಂತಹ ರೈತರನ್ನು ಗುರುತಿಸುವಂತಹ ಕೆಲಸ ಸರ್ಕಾರ ಮಾಡಬೇಕು. _ಮಲ್ಲಿಕಾರ್ಜುನ ಎಸ್. ಸಜ್ಜನ್ (ಕ. ರ. ವೇ ತಾಲೂಕ ಅಧ್ಯಕ್ಷರು ಶಹಾಪುರ )
“ತಂತ್ರಜ್ಞಾನಕ್ಕಿಂತ ಮುಂಚೆ ಆದುನಿಕವಾಗಿ ರೈತರು ಎತ್ತುಗಳನ್ನು ಬೇಸಾಯದಲ್ಲಿ ಬಳಸುತ್ತಿದ್ದರು , ಎತ್ತುಗಳು ಯಂತ್ರಗಳನ್ನು ಮೇರಿಸುವಂತಹ ಕೆಲಸ ಮಾಡಿವೆ , ಎತ್ತುಗಳು ರೈತ ಮಿತ್ರ ಅಂತನೇ ಹೇಳಬಹುದು, ಇಂತಹ ಸಾಮರ್ಥ್ಯ ಎತ್ತುಗಳಲ್ಲಿ ಇದ್ದಿದ್ದು ಹೆಮ್ಮೆಯ ವಿಷಯವಾಗಿದೆ ಅಂತನೇ ಹೇಳಬಹುದು ” _ಮಹಾದೇವಿ ಎಸ್. ಬೇನಾಳಮಠ (ರೈತ ಸಂಘದ ರಾಜ್ಯ ಉಪಾಧ್ಯಕ್ಷರು)
