
ಉದಯವಾಹಿನಿ,ಚಿಂಚೋಳಿ: ಅತ್ತಿಬೆಲೆ ಪಟಾಕಿ ದುರಂತ ನಂತರ ಈಗಾಗಲೇ ರಾಜ್ಯ ಸರ್ಕಾರ ಪಟಾಕಿ ನಿಷೇಧ ಮಾಡಿ ಬದಲಾಗಿ ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.ಪಟ್ಟಣದ ತಹಸೀಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕಿನ ಪಟಾಕಿ ವರ್ತಕರ ಹಾಗೂ ಕಿರಾಣಿ ಅಂಗಡಿ ಇನ್ನೀತರ ಮಳಿಗೆಗಳ ವರ್ತಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,ಸರ್ಕಾರದ ಆದೇಶದಂತೆ ಪಟಾಕಿ ಮಾರಾಟ ಮಾಡುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಹಸಿರು ಪಟಾಕಿ ಮಾರಾಟ ಸಂಭಂಧ ನಿಯಮ ಅನುಸಾರ ಜಿಲ್ಲಾಧಿಕಾರಿಗಳಿಂದ ಕಡ್ಡಾಯವಾಗಿ ಪರವಾನಿಗೆ ಪಡೆದು ಹಸಿರು ಪಟಾಕಿ ಮಾರಾಟ ಮಾಡಬೇಕು.ತಾವು ಯಾವುದೇ ಕಾರಣಕ್ಕೂ ನಿಯಮ ಬಾಹಿರವಾಗಿ ಪಟಾಕಿ ಮಾರಾಟ ಮಾಡಿದ್ದಲ್ಲಿ ಕಿರಾಣಿ ಹಾಗೂ ವರ್ತಕರ ವಿರುದ್ದ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದರು.ತಾಲ್ಲೂಕಿನ ಎಲ್ಲಾ ಪಟಾಕಿ ವರ್ತಕರು ಕಡ್ಡಾಯವಾಗಿ ಪರವಾನಿಗೆ ಪಡೆಯಲು ತಿಳಿಸಿದ್ದರು. ಸಭೆಯಲ್ಲಿ: ತಾಪಂ.ಇಓ ಶಂಕರ ರಾಠೋಡ್,ಗ್ರೇಡ್2 ತಹಸೀಲ್ದಾರ್ ವೆಂಕಟೇಶ ದುಗ್ಗನ್,ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ,ಪಿಎಸ್ಐ ಹಣಮಂತ ಭಂಕಲಗಿ,ಶೀರಸ್ತೇದಾರ ಸುಭಾಷ್ ನಿಡಗುಂದಾ,ಆರ್.ಐ ರವಿಕುಮಾರ ಚಿಟ್ಟಾ,ಸೇರಿದಂತೆ ಅಧಿಕಾರಿಗಳು ಸಿಬ್ಬಂದಿಗಳು ಕಿರಾಣಿ ಅಂಗಡಿ ವರ್ತಕರು ಇದ್ದರು.
