ಉದಯವಾಹಿನಿ, ಸಿರುಗುಪ್ಪ, : ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಒಂದನೇ ವಾರ್ಡಿನಲ್ಲಿ ಅನಧಿಕೃತವಾಗಿ ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿದ್ದ ಪಟಾಕಿ ದಾಸ್ತಾನನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಸಿ ಪಿ ಐ. ಸುಂದರೇಶ್ ಕೆ ಹೊಳೆಣ್ಣವರ್ ನೇತೃತ್ವದ ತಂಡ ದಾಳಿ ನಡೆಸಿ ಪಟ್ಟಣದ ನಿವಾಸಿ ಪಿ ಶಿವಕುಮಾರ್ ತಾನು ಬಾಡಿಗೆ ಪಡೆದ ಗೋದಾಮಿನಲ್ಲಿ 1,62,250 ಮೊತ್ತದ 21 ಬಾಕ್ಸ್ ಗಳಲ್ಲಿ ಸಂಗ್ರಹಿಸಿ ಇಡಲಾಗಿದ್ದ ಅನಧಿಕೃತ ಪಟಾಕಿ ದಾಸ್ತಾನನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣವು ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
