ಉದಯವಾಹಿನಿ, ಬೆಂಗಳೂರು : ಕರ್ನಾಟಕಕ್ಕೆ ಮತ್ತೆ ಶಾಕ್ ಎದುರಾಗಿದ್ದು, ಅ.31 ರವರೆಗೆ ತಮಿಳುನಾಡಿಗೆ ಪ್ರತಿದಿನ 3000 ಕ್ಯೂಸೆಕ್ ನೀರು ಬಿಡುವಂತೆ CWMA ಸೂಚನೆ ನೀಡಿದ್ದು, CWRA ಆದೇಶ ಎತ್ತಿಹಿಡಿದಿದೆ.ಮತ್ತೆ 15 ದಿನ ತಮಿಳುನಾಡಿಗೆ ಪ್ರತಿನಿತ್ಯ 3000 ಕ್ಯೂಸೆಕ್ ನೀರು ಹರಿಸುವಂತೆ ‘CWRC’ ಕರ್ನಾಟಕಕ್ಕೆ ಇತ್ತೀಚೆಗೆ ಆದೇಶ ಹೊರಡಿಸಿದ್ದು, ಆದೇಶ ಪರಿಶೀಲನೆಗೆ ಇಂದು CWMA ಸಭೆ ನಡೆದಿದೆ.
ಕಾವೇರಿ ಕೊಳ್ಳದ ರಾಜ್ಯದ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಆದರೆ CWMA CWRA ಆದೇಶ ಎತ್ತಿಹಿಡಿದಿದ್ದು, ಅ.16 ರಿಂದ ಅ. 31 ರವರೆಗೆ ತಮಿಳುನಾಡಿಗೆ ನೀರು ಬಿಡುವಂತೆ ಸೂಚನೆ ನೀಡಿದೆ.
ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಶುಕ್ರವಾರ ಮಹತ್ವದ ಸಭೆ ನಡೆಸಿದ ಸಮಿತಿಯು ತಮಿಳುನಾಡಿಗೆ ಇನ್ನೂ 15 ದಿನಗಳ ಕಾಲ ಅಂದ್ರೆ ಅಕ್ಟೋಬರ್ 16ರಿಂದ 31ರ ವರೆಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ ನೀಡಿದೆ. CWRA ಆದೇಶ ಪಾಲಿಸುವಂತೆ CWMA ಸೂಚನೆ ನೀಡಿದೆ.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಮೊನ್ನೆ ಸಭೆ ನಡೆಸಿ ಮತ್ತೆ ತಮಿಳುನಾಡಿಗೆ ಪ್ರತಿದಿನ 3 ಸಾವಿರ ಕ್ಯುಸೆಕ್ ನೀರನ್ನು 15 ದಿನಗಳ ಕಾಲ ಬಿಡುವಂತೆ ಸೂಚನೆ ನೀಡಿತ್ತು. ಮುಂದಿನ ವಾರದಿಂದ ತಮಿಳುನಾಡಿಗೆ ವಾಯುವ್ಯ ಮಾರುತಗಳಿಂದ ಮಳೆಯಾಗಲಿದ್ದು, ಅಲ್ಲಿನ ನೀರಿನ ಸಮಸ್ಯೆ ನಿವಾರಣೆ ಆಗುತ್ತದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಮುಂದುವರೆದಿರುವುದರಿಂದ ನೀರು ಬಿಡುವುದು ಕಷ್ಟವಾಗುತ್ತದೆ ಎಂದು ರಾಜ್ಯದ ಅಧಿಕಾರಿಗಳು ವಾದ ಮಂಡಿಸಿದ್ದರು. ಇದೀಗ ಅದೇ ಆದೇಶವನ್ನು ಮುಂದುವರೆಸುವಂತೆ ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!