
ಉದಯವಾಹಿನಿ ಬೆಂಗಳೂರು : ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮೂವರು ಪ್ರಯಾಣಿಕರಿಂದ 1 ಕೋಟಿ ಮೌಲ್ಯದ ಸುಮಾರು 1.7 ಕೆಜಿ ಚಿನ್ನಾಭರಣಗಳು ಹಾಗೂ ನಾಲ್ಕು ಲ್ಯಾಪ್‌ಟಾಪ್‌ಗಳನ್ನು ಕೆಂಪೇಗೌಡ ಏರ್ಪೋರ್ಟ್ ನ ಏರ್ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಿಂಗಾಪುರದಿಂದ ಬಂದಂತ ಪ್ರಯಾಣಿಕ ಶೂ ಹಾಗೂ ಲ್ಯಾಪ್ಟಾಪ್ ಗಳಲ್ಲಿ 945 ಗ್ರಾಂ ಚಿನ್ನವನ್ನು ಮರೆಮಾಚಿ ಸಾಗಾಟ ಮಾಡುತ್ತಿದ್ದಾಗ ಪತ್ತೆಯಾಗಿದೆ.ಕುವೈತ್ನಿಂದ ಆಗಮಿಸಿದ್ದ ಪ್ರಯಾಣಿಕ 689.65 ಗ್ರಾಂ ಚಿನ್ನವನ್ನು ಗುದದ್ವಾರದಲ್ಲಿ ಸಾಗಿಸುತ್ತಿದ್ದ.ಶ್ರೀಲಂಕಾದ ಕಲಂಬದಿಂದ ಬಂದ ಮತ್ತೊಬ್ಬ ಪ್ರಯಾಣಿಕ 13 ಪಾಯಿಂಟ್ ಮೂರು ಮೂರು ಗ್ರಾಂ ಚಿನ್ನವನ್ನು ಒಳಉಡುಪಿನಲ್ಲಿ ಇಟ್ಟುಕೊಂಡು ಬರುತ್ತಿದ್ದಾಗ ಪತ್ತೆಯಾಗಿದೆ. ಒಟ್ಟಾರೆ ಮೂವರಿಂದಲೂ ಕೂಡ 1.7 ಕೆಜಿ ಚಿನ್ನವನ್ನು ಕೆಂಪೇಗೌಡ ಏರ್ಪೋರ್ಟ್ ನ ಏರ್ ಕಸ್ಟಮ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.ಮೂವರು ಪ್ರಯಾಣಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ್ದಿದ್ದು ಪತ್ತೆಯಾಗಿದೆ. ಮೂವರು ಬೇರೆ ಬೇರೆ ದೇಶಗಳಿಂದ ಬಂದಿದ್ದಾರೆ. ಸಿಂಗಾಪುರ, ಕುವೈತ್ ಹಾಗೂ ಕೊಲಂಬೋದಿಂದ ಬಂದಂತ ಪ್ರಯಾಣಿಕರು. ಅನುಮಾನಗೊಂಡಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ್ದು ಪತ್ತೆಯಾಗಿದೆ.
ಪಾಸ್ತಾ ಮಿಷನ್ ಅಲ್ಲಿ ಚಿನ್ನ ಅಡವಿಟ್ಟ ಭೂಪ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬೆಳೆಯ ಏರ್ಪೋರ್ಟ್ ನಲ್ಲಿ ಪಾಸ್ತಾ ಮಾಡುವ ಮಿಷನ್ ಒಳಗಡೆ ಚಿನ್ನ ಅಡಗಿಸಿಟ್ಟಿದ್ದ ಆರೋಪಿ ದುಬೈ ನಿಂದ ಕೆಐಬಿಗೆ ಇಂಡಿಗೋ ವಿಮಾನದಲ್ಲಿ ಆರೋಪಿ ಬಂದಿದ್ದ ಎನ್ನಲಾಗಿದೆ. ಪರಿಶೀಲನ ವೇಳೆ ಪಾಸ್ತಾ ಮಿಷನ್ ನಲ್ಲಿ ಚಿನ್ನವಿರುವುದು ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.ಸುಮಾರು 35,37,678 ರೂಪಾಯಿ ಮೌಲ್ಯದ 598 ಗ್ರಾಂ ಚಿನ್ನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
