
ಉದಯವಾಹಿನಿ ಶಿಡ್ಲಘಟ್ಟ: ರಾಮಜನ್ಮಭೂಮಿಗೆ ಇಡೀ ದೇಶದಲ್ಲೇ ಪವಿತ್ರ ಮಣ್ಣು ಸಂಗ್ರಹಿಸಿದಂತೆ ದೇಶದ ರಕ್ಷಣೆಯಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಯೋಧರ ಸ್ಮರಣಾರ್ಥವಾಗಿ ನಿರ್ಮಿಸಲಿರುವ ಉದ್ಯಾನಕ್ಕೆ ದೇಶದ ಶಕ್ತಿಶಾಲಿ ಮಣ್ಣಿನ ಜಾಗವಾಗಬೇಕೆಂಬ ಉದ್ದೇಶದಿಂದ ಈ ಪವಿತ್ರ ಮಣ್ಣು ಸಂಗ್ರಹಿಸಲಾಗುತ್ತಿದೆ ಎಂದು ಶಾಸಕ ಬಿಎನ್ ರವಿಕುಮಾರ್ ತಿಳಿಸಿದರು.ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ವತಿಯಿಂದ ಮಂಗಳವಾರದಂದು ಹಮ್ಮಿಕೊಂಡಿದ್ದ ‘ನನ್ನ ಮಣ್ಣು-ನನ್ನ ದೇಶ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಪ್ರತಿಯೊಬ್ಬ ನಾಗರಿಕರು ದೇಶ ಪ್ರೇಮ ಬೆಳೆಸಿಕೊಂಡು ದೇಶಕ್ಕಾಗಿ ನಿರ್ಮಾಣ ಮಡಿದವರ ಹೆಸರಿನಲ್ಲಿ ಬೃಂದಾವನ ಮಾಡಲು ಗ್ರಾಮೀಣ ಪ್ರದೇಶದಿಂದ ಮಣ್ಣನ್ನು ಸಂಗ್ರಹಿಸಿ ಪ್ರತಿ ತಾಲ್ಲೂಕು, ಜಿಲ್ಲೆಯಿಂದ ಕ್ರೋಢೀಕರಿಸಿ ಜಿಲ್ಲೆಯ ನೆಹರೂ ಯುವ ಕೇಂದ್ರದವರಿಗೆ ಕಳಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು. ಪ್ರತಿ ಗ್ರಾಮ ಪಂಚಾಯಿತಿಯಿಂದ ಅಮೃತ ಕಳಸ ಯಾತ್ರೆಯಲ್ಲಿ ತೆಗೆದುಕೊಂಡು ಬಂದ ಮಣ್ಣನ್ನು ಪ್ರತಿಯೊಬ್ಬ ಯುವಕರು ನಮ್ಮ ದೇಶದ ವೀರ ಯೋಧರನ್ನು ನೆನಪಿಸಿಕೊಂಡು ನಾವೆಲ್ಲರೂ ದೇಶ ಭಕ್ತರಾಗಬೇಕು ಎಂದು ಸಲಹೆ ವಿತರಿಸಿ ನೀಡಿದರು. ಅಮೃತ ಕಳಶ ಹಾಗೂ ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಂಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ನನ್ನ-ಮಣ್ಣು ನನ್ನ-ದೇಶ ಅಭಿಯಾನ ಮತ್ತು ಹಳ್ಳಿಯಿಂದ ಅಮೃತ ಕಳಶ ಯಾತ್ರೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಮೂಲಕ ಕಾರ್ಯಕ್ರಮವನ್ನು ಹಮ್ಮಿಕೊಂಡು, ನಂತರ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿಯಿಂದ ಶೇಖರಿಸಿದ ಕಳಶದ ಮಣ್ಣನ್ನು ಕ್ರೋಢೀಕರಿಸಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು ತಿಳಿಸಿದರು.ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಆಂಜನೇಯಲು ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ,ಸಿಡಿಪಿಒ ನೌತಾಜ್,ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ,ಕ್ಷೇತ್ರ ಸಿಕ್ಷಣಾಧಿಕಾರಿ ಸಿ.ಎ ನರೇಂದ್ರಕುಮಾರ್, ತಾದೂರು ರಘು,ಕತ್ತನೂರು ಲಕ್ಷ್ಮೀಪತಿ(ಪತಿ) ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸೇರಿದಂತೆ ಇತರರು ಹಾಜರಿದ್ದರು.
