
ಉದಯವಾಹಿನಿ ಇಂಡಿ : ನಿವೃತ್ತ ನೌಕರರು ಪಿಂಚಣಿ ಪಡೆಯುವವರು ನವೆಂಬರ್ ತಿಂಗಳಲ್ಲಿ ಜೀವನ ಪ್ರಮಾಣ ಪತ್ರ ನೀಡುವದು ಕಡ್ಡಾಯವಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ಇಂಡಿ ಶಾಖೆಯ ಮುಖ್ಯ ಪ್ರಭಂದಕ ಬಿ.ಜೆ.ರಾಮಸ್ವಾಮಿ ಹೇಳಿದರು.ಪಟ್ಟಣದ ಎಸ್ ಬಿಐ ಶಾಖೆಯಲ್ಲಿ ನಿವೃತ್ತ ನೌಕರರ ಪಿಂಚಣಿ ಕುರಿತು ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು.ರವಿ ತಳವಾರ ಮತ್ತು ಪರಶುರಾಮ ತೆನೆಹಳ್ಳಿ ಮಾತನಾಡಿ ನವೆಂಬರ್ ತಿಂಗಳಲ್ಲಿ ಪಿಂಚಣಿದಾರರು ಲಾಯಿಫ್ ಸರ್ಟೀಫಿಕೇಟ ನೀಡುವದು, ಯುನೋ ಆಫ್ ಉಪಯೋಗಿಸಿಕೊಂಡು ಡಿಜಿಟಲ್ ಎಲ್ಲ ಸೌಲಭ್ಯ ಪಡೆದುಕೊಳ್ಳಬಹುದು ಮತ್ತು ಬ್ಯಾಂಕಿಗೆ ಹಣ ಪಡೆಯಲು ಬರದೇ ಎಟಿಎಂ ಸೌಲಭ್ಯ ಪಡೆಯಲು ಹೇಳಿದರು.ಪಿಂಚಣಿದಾರರಾದ ನಿವೃತ್ತ ಪ್ರಾಚಾರ್ಯ ಎಸ್.ಡಿ.ಬೆಳಕಿಂಡಿ,ಎಸ್.ಆರ್.ಮೂರಮನ, ಡಿ.ಎ.ಲಮಾಣಿ,ಸಿದ್ದಪ್ಪ ಬಗಲಿ,ಟಿ.ಎಸ್.ರಾಠೋಡ,ಎ.ಎಚ್.ಚವ್ಹಾ ಣ,ಪಿ.ಎಸ್.ಸಾಲಕ್ಕಿ,ಟಿ.ಡಿ.ಅರಬ,ಎಂ. ಪಿ.ಬಿರಾದಾರ,ಪಿ.ಎನ್.ಸೋನವನೆ ಮತ್ತಿತರಿದ್ದರು.
