ಉದಯವಾಹಿನಿ ದೇವರಹಿಪ್ಪರಗಿ: ದೇಶದ ಏಕತೆ ಸಂಕೇತವಾಗಿ ‘ನನ್ನ ಮಣ್ಣು ನನ್ನ ದೇಶದ ಅಭಿಯಾನ’ ಅಡಿಯಲ್ಲಿ ದೇಶಾದ್ಯಂತ ಮೃತ್ತಿಕೆ ಸಂಗ್ರಹಿಸಿ ಅಮೃತ ಉದ್ಯಾನ ನಿರ್ಮಾಣ ಮಾಡಲಾಗುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು. ಪಂಚಾಯತ ವಿಜಯಪುರ ಹಾಗೂ ತಾಲೂಕ ಪಂಚಾಯತ ದೇವರಹಿಪ್ಪರಗಿ ಸಂಯುಕ್ತಾಶ್ರಯದಲ್ಲಿ ಅಜಾದಿ ಕಾ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ನನ್ನ ಮಣ್ಣು ನನ್ನ ದೇಶ ಅಭಿಯಾನದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು,ತಾ.ಪಂ ಮಾನವಿ ರವರು ಮಾತನಾಡಿ, ನಮ್ಮ ತಾಲೂಕಿನ ಎಲ್ಲಾ ಗ್ರಾಮಗಳಿಂದ ಸಂಗ್ರಹಿಸಲಾದ ಮಣ್ಣನ್ನು ರಾಷ್ಟ್ರದ ರಾಜಧಾನಿಯಾದ ನವದೆಹಲಿಗೆ ನಮ್ಮ ದೇಶಕ್ಕಾಗಿ ಶ್ರಮಿಸಿದ, ತ್ಯಾಗ ಮತ್ತು ಬಲಿದಾನವಾದ ವ್ಯಕ್ತಿಗಳ ಸ್ಮರಣೆಗಾಗಿ ಈ ಮಣ್ಣನ್ನು ರಾಷ್ಟ್ರದ ರಾಜಧಾನಿಯಲ್ಲಿ ಯುನೀಕ್ ಪವಿತ್ರವಾದ ಉದ್ಯಾನ ವನ ನಿರ್ಮಿಸಲು ಉಪಯೋಗಿಸುವುದಕ್ಕಾಗಿ ಕಳುಹಿಸುತ್ತಿರುವುದು ಹೆಮ್ಮೆಯ ವಿಷಯವೆಂದು ಸಂತಸ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಐ.ಇ.ಸಿ ಸಂಯೋಜಕ ಸಿದ್ದು ಕಾಂಬಳೆ ಪಂಚ ಪ್ರಾಣ ಶಪಥ  ಬೋಧಿಸಿ ಮಾತನಾಡಿದ ಅವರು, ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದ ಬಗ್ಗೆ ಜನರಲ್ಲಿ ದೇಶಾಭಿಮಾನ ಮತ್ತು ಮಾಜಿ ಸೈನಿಕರಿಗೆ ಗೌರವ ಸಲ್ಲಿಸುವುದಕ್ಕಾಗಿ ತಾ ಪಂ ಕಾರ್ಯಾಲಯದಿಂದ ಪಟ್ಟಣದ ವಿವಿದ ಬೀದಿಗಳಲ್ಲಿ ಯಾತ್ರೆಯನ್ನು  ಹಮ್ಮಿಕೊಳ್ಳಲಾಯಿತು.  ಮಹಿಳೆಯರು ಅಮೃತ ಕಳಸವನ್ನು ಹೊತ್ತು  ಸಂಚರಿಸಿದ್ದು ವಿಶೇಷವಾಗಿತ್ತು.ಇದೇ ಸಂದರ್ಭದಲ್ಲಿ ತಾಲೂಕ ಯೋಜನಾಧಿಕಾರಿ ಶ್ರೀನಿವಾಸ ಪವಾರ, ನೆಹರು ಯುವ ಕೇಂದ್ರ ಸಂಜೀವ ಪವಾರ, ಗ್ರಾಮ ಕಾಯಕ ಮಿತ್ರ, ತಾಂಡ ರೋಜ್ಗಾರ್ ಮಿತ್ರ, ಬೇರ್ಪೋರ್ಟ್ ಟೆಕ್ನಿಷಿಯನ್, ಗ್ರಾಮ ಪಂಚಾಯತ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಎನ್ ಆರ್‌ಎಲ್‌ ಎಂ ಸಿಬ್ಬಂದಿ, ಮತ್ತು ಪಂಚಾಯಿತಿ ಸಿಬ್ಬಂದಿ,  ಭಾಗವಹಿಸಿದ್ದರು. ಕಿರಣ ಪಾಟೀಲ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!