
ಉದಯವಾಹಿನಿ ಶಿರಹಟ್ಟಿ: ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತ, ಜನ ವಿರೋಧಿ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು. ಸರ್ಕಾರದ ದುರಾಡಳಿತ ಖಂಡಿಸಿ ಬಿಜೆಪಿ ಮಂಡಲದಿಂದ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಎತ್ತು ಚಕ್ಕಡಿ ಮೂಲಕ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಲಾಯಿತು. ನೆಹರು ವೃತ್ತದಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ಮಳೆ ಇಲ್ಲದೆ ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ರೈತರು, ಕೃಷಿ ಕೂಲಿ ಕಾರ್ಮಿಕರು ಉದ್ಯೋಗ ಇಲ್ಲದೆ ಬೇರೆಡೆ ದುಡಿಯಲು ಹೊರಟಿದ್ದಾರೆ. ಆದರೂ ರಾಜ್ಯ ಸರ್ಕಾರ ಜನರ ಹಿತ ಕಾಪಾಡಲು ಮು0ದೆ ಬಾರದಿರುವುದು ಬೇಸರದ ಸಂಗತಿ ಎಂದರು.ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಯಾದ ಶರಣು ಅಂಗಡಿ ಮಾತನಾಡಿ ರಾಜ್ಯದ ರೈತರ ಬಗ್ಗೆ ಸ್ವಲ್ಪವಾದರೂ ಗಮನ ಇಲ್ಲದಂತಾಗಿದೆ ಮುಂಗಾರು ಬೆಳೆ ಸಂಪೂರ್ಣವಾಗಿ ಕೈಕೊಟ್ಟಿರುವುದರಿಂದ ರಾಜ್ಯದ ರೈತರ ಕಣ್ಣೀರು ಒರೆಸುವಂತಹ ಕೆಲಸ ಮಾಡಬೇಕು ರಾಜ್ಯಗಳ ಚುನಾವಣೆಗೆ ಹಣ ಸಂದಾಯ ಮಾಡಲು ಎಟಿಎಂ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೇವಲ ಬಿಟ್ಟಿಭಾಗ್ಯಗಳ ನೆಪದಲ್ಲಿ ರಾಜ್ಯದ ಹಣವನ್ನು ಬೇರೆ ರಾಜ್ಯದ ಚುನಾವಣೆಗೆ ಕೊಂಡೋಯುತ್ತಿರುವುದು ರಾಜ್ಯಕ್ಕೆ ಮಾಡುತ್ತಿರುವ ಘೋರ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನರಿಗೆ ಪಾರದರ್ಶಕ ಆಡಳಿತ ನೀಡುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದ ಮಂತ್ರಿಮಂಡಳ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಫಕೀರೇಶ ರಟ್ಟಿಹಳ್ಳಿ, ಬಿ.ಡಿ.ಪಲ್ಲೇದ, ಶೇಖರಯ್ಯ ಸಜ್ಜನರ, ನಾಗರಾಜ ಲಕ್ಕುಂಡಿ, ಶಂಕರ ಮರಾಠ, ಅಕ್ಟರ್ ಯಾದಗಿರಿ, ಪ್ರವೀಣ ಪಾಟೀಲ, ರಾಮಣ್ಣ ಕಂಬಳಿ, ಗೂಳಪ್ಪ ಕರಿಗಾರ, ರಾಜೀವರೆಡ್ಡಿ ಬೊಮ್ಮನಕಟ್ಟಿ, ತಿಪ್ಪಣ್ಣ ಕೊಂಚಿ ಗೇರಿ, ಗಂಗಾಧರ ಮೆಣಸಿನಕಾಯಿ, ಸಂದೇಶ ಗಾಣಿಗೇರ, ಅಶೋಕ ಪಲ್ಲೇದ, ಬಸವರಾಜ ಪೂಜಾರ ಈರಣ್ಣ ಗಾಣಿಗೇರ್. ವಿಜಯಕುಮಾರ್ ಬೂದಿಹಾಳ, ಶಿವಯೋಗಿ ಪಟ್ಟಣಶೆಟ್ಟಿ, ಬಸವರಾಜ ರಾಜಮನಿ, ಮುತ್ತು ನವಲಗುಂದ, ಮಂಜು ಅಂಗಡಿ, ಶರಣು ಹೊಸೂರ, ಮಲ್ಲಿಕಾರ್ಜುನ ಕಬಾಡರ,ಚನ್ನಬಸವ ಬೆನಕನಹಳ್ಳಿ, ಇದ್ದರು.
