ಉದಯವಾಹಿನಿ, ದೇವರಹಿಪ್ಪರಗಿ: ಪಟ್ಟಣದ ಆರಾಧ್ಯ ದೈವ ಶ್ರೀ ರಾವುತರಾಯ ಮಲ್ಲಯ್ಯ  ಜಾತ್ರಾ ಮಹೋತ್ಸವ ಅಂಗವಾಗಿ ಟ್ಯಾಕ್ಟರ್ ಗೆಳೆಯರ ಬಳಗ ವತಿಯಿಂದ ಹಮ್ಮಿಕೊಂಡ ಟ್ಯಾಕ್ಟರ್ ಜಗ್ಗುವ ಸ್ಫರ್ಧೆಯು  ಜಾತ್ರಾ ಮಹೋತ್ಸವದಲ್ಲಿ ನೆರೆದಿದ್ದ ಜನರನ್ನ ರೋಮಾಂಚನಗೊಳಿಸಿತು.ಪಟ್ಟಣದಲ್ಲಿ ಗುರುವಾರದಂದು ಸಿದ್ದೇಶ್ವರ ಶಾಲೆಯ ಹತ್ತಿರ ಇದೇ ಪ್ರಥಮ ಬಾರಿಗೆ ಹಮ್ಮಿಕೊಂಡ ಟ್ಯಾಕ್ಟರ್ ಜಗ್ಗಾಟ ಸ್ಪರ್ಧೆಯಲ್ಲಿ ಪಟ್ಟಣ ಸೇರಿದಂತೆ ವಿವಿಧ ಭಾಗಗಳಿಂದ ಹಲವಾರು ಟ್ಯಾಕ್ಟರ್‍ಗಳು ಸ್ಫರ್ಧೆಯಲ್ಲಿ ಭಾಗವಿಸಿದ್ದವು.ಟ್ಯಾಕ್ಟರ್ ಸ್ಪರ್ಧೆಗೆ ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ಚಾಲನೆ ನೀಡಿ ಮಾತನಾಡಿ ಭಾರತೀಯ ಕ್ರೀಡೆಯಲ್ಲಿ ಗ್ರಾಮೀಣ ಕ್ರೀಡೆಯಾದ ಟ್ಯಾಕ್ಟರ್ ಜಗ್ಗುವ ಸ್ಪರ್ಧೆ ಕೂಡ ಒಂದು, ಇತ್ತೀಚಿನ ದಿನಮಾನಗಳಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿರುವುದು ವಿಷಾದನೀಯ. ಯುವಕರು ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಿ ಆ ಕ್ರೀಡೆಗಳನ್ನು ಉಳಿಸಿ. ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆಗಳಲ್ಲಿ ಭಾಗವಹಿಸಬೇಕು ಇದರಿಂದ ಅವರ ಆರೋಗ್ಯ ವೃದ್ಧಿಯಾಗುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮ.ನಿ.ಪ್ರ ಮಡಿವಾಳೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಪ್ರಾಸ್ತಾವಿಕವಾಗಿ ಟ್ಯಾಕ್ಟರ್ ಗೆಳೆಯರ ಬಳಗದ ಸದಸ್ಯರಾದ ವೀರೇಶ ಕುದುರಿ ಮಾತನಾಡಿ, ಕ್ರೀಡಾ ಪ್ರೋತ್ಸಾಹದಾಯಕವಾಗಿ ಅರ್ಧ ತೊಲೆ ಬಂಗಾರ ಪ್ರಥಮ ಬಹುಮಾನ ಘೋಷಿಸಿದ್ದಾರೆ. ದ್ವಿತೀಯ ಬಹುಮಾನ 20ಸಾವಿರ ರೂ ಸಂಗಪ್ಪ ಯಂಬತನಾಳ ಹಾಗೂ ಪ.ಪಂ ಸದಸ್ಯರಾದ ಕಾಸುಗೌಡ ಜಲಕತ್ತಿ ಅವರು ತೃತೀಯ ಬಹುಮಾನ 10ಸಾವಿರ ರೂ ಘೋಷಿಸಿದ್ದಾರೆ ಎಂದು ತಿಳಿಸಿದರು. ಸ್ಪರ್ಧೆಯನ್ನು ವೀಕ್ಷಿಸಲು ವಿವಿಧ ಭಾಗಗಳಿಂದ ಅಪಾರ ಸಂಖ್ಯೆ ಜನರು ಆಗಮಿಸಿದ ಕಾರಣ ಜನಜಂಗುಳಿ ಕಂಡು ಬಂದಿತು. ಸ್ಪರ್ಧೆ ಆರಂಭವಾಗುತ್ತಿದ್ದಂತೆ ಜನರ ಹರ್ಷೋದ್ದರ ಮುಗಿಲುಮುಟ್ಟಿತು, ಇಂದು ಹಾಗೂ ನಾಳೆ ನಡೆಯಲಿರುವ ಕಾರ್ಯಕ್ರಮಕ್ಕೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದರು. ಇದೇ ಸಂದರ್ಭದಲ್ಲಿ ಡಾ. ಸತೀಶ ನಾಡಗೌಡ,ಪ.ಪಂ ಸದಸ್ಯರಾದ ಕಾಸುಗೌಡ ಬಿರಾದಾರ ಜಲಕತ್ತಿ,ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ, ಗ್ರೇಡ್-2 ತಹಶೀಲ್ದಾರ್ ಶಾಮಣ್ಣ ನಾಯಕ್,ಯುವ ಮುಖಂಡರುಗಳಾದ ಮುನೀರ್ ಅಹ್ಮದ್ ಮಳಖೇಡ, ವಿನೋದಗೌಡ ಪಾಟೀಲ,ಕಾಸು ಕುದುರಿ, ರಾಮು ದೇಸಾಯಿ, ರಮೇಶ ಮಶಾನವರ, ರಾಘವೇಂದ್ರ ಗುಡಿಮನಿ, ರಾಮೇಶ ಅಸ್ಕಿ,ಸಂಜು ಕೊಟಿನ್, ಸಂತೋಷ ದೇಸಾಯಿ, ಸಿದ್ದು ಮೇಲಿನಮನಿ, ಶಬ್ಬೀರ್ ಮುಲ್ಲಾ ಸೇರಿದಂತೆ ಗೆಳೆಯರ ಬಳಗದ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!