
ಉದಯವಾಹಿನಿ, ದೇವದುರ್ಗ: ಜಂಬಲದಿನ್ನಿ ಕ್ರಾಸ್‍ನಿಂದ 4ಕಿಮೀ ಹೇರುಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀರ ಹದಗಟ್ಟಿದೆ. ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿದ್ದರಿಂದ ಸುಗಮ ಸಂಚಾರಕ್ಕೆ ಅಡಚರಣೆ ಉಂಟಾಗುತ್ತಿದೆ. ಕಿರಿದಾದ ರಸ್ತೆಯಿಂದ ಬಿದ್ದಂತ ಗುಂಡಿಗಳನ್ನು ಬೈಕ್ ಸವಾರರು ತಪ್ಪಿಸಿ ಸಂಚಾರ ಮಾಡುವುದೇ ಸರ್ಕಸ್ ಮಾಡಿದಂತಾಗುತ್ತಿದೆ. ರಾತ್ರಿ ವೇಳೆ ಈರಸ್ತೆ ಮಾರ್ಗವಾಗಿ ಗ್ರಾಮಕ್ಕೆ ತೆರಳುವಂತ ಗ್ರಾಮಸ್ಥರು ಹಲವು ಸಮಸ್ಯೆ ಎದುರಿಸುವಂತಿದೆ. ಹಲವು ಬಾರಿ ಗ್ರಾಮಸ್ಥರು ಸಂಬಂದಪಟ್ಟಂತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಬಿದ್ದಿರುವಂತ ಗುಂಡಿಗಳಿಗೆ ತಾತ್ಕಾಲಿಕ ಮರಂ ಹಾಕಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಹಿಂದೇಟು ಹಾಕಿದ್ದಾರೆ ಎಂದು ಗ್ರಾಮಸ್ಥರ ಆರೋಪವಾಗಿದೆ. ಹೇರುಂಡಿ ಕ್ರಾಸ್‍ನಿಂದ ಗ್ರಾಮದವರಿಗೆ ಅಲ್ಲಲ್ಲಿ ಬಹುತೇಕ ಗುಂಡಿಗಳು ಬಿದ್ದಿವೆ. ಕಳೆದ ಮೂರು ವರ್ಷಗಳಿಂದೆ ಕೋಟ್ಯಾಂತರ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿದೆ. ಆದರೀಗ ರಸ್ತೆ ನಿರ್ವಹಣೆ ಇಲ್ಲವಾದ್ದರಿಂದ ದಿನೇ ದಿನೇ ಗುಂಡಿಗಳು ಮತ್ತಷ್ಟು ಹಾಳಾಗುತ್ತಿವೆ. ಅದರಲ್ಲಿ ಮರಳು ಸಾಗಣೆ ಟಿಪ್ಪರ್‍ಗಳು ಟ್ಯಾಕ್ಟರ್‍ಗಳು ಹಗಲು ರಾತ್ರಿ ಎನ್ನದೇ ಓಡಾಟದಿಂದಲೇ ರಸ್ತೆ ತೀರ ಹದಗೆಡಲು ಕಾರಣ ಎನ್ನಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಹದಗೆಟ್ಟಿರುವ ರಸ್ತೆಯ ಮೇಲೆ ಗ್ರಾಮಸ್ಥರು ಸಂಚಾರ ಮಾಡುವಂತಾಗಿದೆ. ಈಭಾಗದ ರಸ್ತೆಗಳ ನಿರ್ವಹಣೆ ಜವವ್ದಾರಿ ಹೊತ್ತಿರುವ ಜೆಇಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗುತ್ತಿದೆ. ಎಲ್ಲೆಂದರಲ್ಲಿ ಬಿದ್ದಿರುವಂತ ಗುಂಡಿಗಳಿಗೆ ತಾತ್ಕಾಲಿಕ ಮರಂ ಹಾಕಿ ಸಂಚಾರಕ್ಕೆ ಅನುಕೂಲು ಕಲ್ಪಿಸುವಲ್ಲಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ದಿನಕ್ಕೆ ಎರಡು ಬಾರಿ ಗ್ರಾಮಕ್ಕೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಕಿರಿದಾದ ರಸ್ತೆಯಿಂದ ಒಂದು ವಾಹನ ಬಂದಾಗ ಮೊತ್ತೊಂದು ವಾಹನ ರಸ್ತೆ ದಾಟುವುದೇ ತೀರ ಸಮಸ್ಯೆಗೆ ಕಾರಣವಾಗಿದೆ.
ಹೇರುಂಡಿ ಗ್ರಾಮದ ಸುಮಾರು ನಾಲ್ಕು ಕಿಮೀ ರಸ್ತೆಯೊಂದಕ್ಕೂ ಎಲ್ಲೆಂದರಲ್ಲಿ ರಸ್ತೆಗೆ ಜಾಲಿಮುಳ್ಳುಗಳು ಬಾಗಿ ನಿಂತಿವೆ. ಇಂತಹ ವಾತಾವರಣ ನಿರ್ಮಾಣವಾದ್ದರಿಂದ ಬೈಕ್ ಸವಾರರು ಹಲವು ಸಮಸ್ಯೆಗಳು ಎದರಿಸಲಾಗುತ್ತಿದೆ. ಮಾರ್ಚ್ ವೇಳೆ ಜಂಗಲ್ ಕಟ್ಟಿಂಗ್ ಮಾಡಲಾಗುತ್ತದೆ. ಇಲ್ಲಿವರೆಗೆ ಯಾವುದೇ ಜಾಲಿಮುಳ್ಳುಗಳು ಕಟ್ಟಿಂಗ್ ಮಾಡದೇ ಹಿನ್ನೆಲೆ ಬೈಕ್ ಸವಾರರು ಕೈಯಿಗೆ ಮೈಯಿಗೆ ತರಿಸಿಕೊಂಡು ಸಂಚಾರ ಮಾಡುವಂತಿದೆ.
ಹೇರುಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು, ರಸ್ತೆಗೆ ಬಾಗಿ ನಿಂತಿರುವ ಜಾಲಿಮುಳ್ಳುಗಳು ಇಲ್ಲಿತನಕ ದುರಸ್ತಿಗೆ ಅಧಿಕಾರಿಗಳು ಮುಂದಾಗಿಲ್ಲ. ಒಬ್ಬರ ಮೇಲೆ ಮೊತ್ತೊಬ್ಬರು ಬೊಟ್ಟು ತೊರುತ್ತಿದ್ದರಿಂದ ಉತ್ತಮ ಗುಣಮಟ್ಟದ ಅಭಿವೃದ್ಧಿಗೆ ಹಿನ್ನೆಡೆ ಉಂಟಾಗಿದೆ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಕೋಟ್ಯಾಂತರ ರೂ. ಅನುದಾನ ವ್ಯಯಿಸುತ್ತಿದೆ. ಸ್ಥಳೀಯ ಜನಪತ್ರಿನಿಧಿಗಳು ಹಾಗೂ ಅಧಿಕಾರಿಗಳು ಅಲಕ್ಷ ಮನೋಭಾವನೆ ತಾಳಿದ್ದರಿಂದ ಹಳ್ಳಿಗಳ ರಸ್ತೆಗಳ ಅಭಿವೃದ್ಧಿಗೆ ಗ್ರಹಣ ಹಿಡುದಂತಾಗಿದೆ.
ಹೇರುಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀರ ಹದಗೆಟ್ಟಿರುವುದು ಜೆಇಯಿಂದ ಮಾಹಿತಿ ಪಡೆಯುತ್ತೇನೆ. ಇತ್ತೀಚಿಗೆ ಅಧಿಕಾರ ವಹಿಸಿಕೊಂಡಿದ್ದೇನೆ. ಪರಿಶೀಲನೆ ಮಾಡಿ ಕ್ರಮವಹಿಸಲಾಗುತ್ತದೆ: ಡಾ.ಶರಣಬಸಪ್ಪ ಪರಮೇಶ್ವರ ಎಇಇ
ಕಳೆದ ಒಂದು ವರ್ಷಗಳಿಂದ ಹೇರುಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀರ ಹದಗಟ್ಟಿದೆ. ತಾತ್ಕಾಲಿಕ ಮರಂ ಹಾಕಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಅಧಿಕಾರಿಗಳು ಮೀನಮೇಷ ಎಣಿಸಲಾಗುತ್ತಿದೆ. ಎಲ್ಲೆಂದರಲ್ಲಿ ರಸ್ತೆ ಮಧ್ಯೆ ಜಾಲಿಮುಳ್ಳುಗಳು ಬಾಗಿ ನಿಂತಿವೆ: ನರಸಣ್ಣ ನಾಯಕ ಜಾಲಹಳ್ಳಿ ಕೆಪಿಆರ್‍ಎಸ್ ಜಿಲ್ಲಾ ಕಾರ್ಯದರ್ಶಿ
