ಉದಯವಾಹಿನಿ, ಸಿಂಧನೂರು: ಮಳೆಯ ಅಭಾವದಿಂದ ಈ ಬಾರಿ ಮುಂಗಾರು ಹಾಗೂ ಹಿಂಗಾರು ಸಂಪೂರ್ಣ ವಿಫಲ ವಾಗಿದ್ದು ಅದನ್ನು ಎದುರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆಂದು ಹುಬ್ಬಳ್ಳಿ – ಧಾರವಾಡ ಶಾಸಕರಾದ ಅರವಿಂದ್ ಬೆಲ್ಲದ್ ಆಕ್ರೋಶ ಹೊರ ಹಾಕಿದರು.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ಪ್ರಸ್ತುತ ತುಂಗಭದ್ರಾ ಡ್ಯಾಂ ನಲ್ಲಿ ಇಪ್ಪತೈದು ಟಿ.ಎಮ್.ಸಿ ಗೆ ಬಂದಿದೆ ರಾಜ್ಯ ಸರ್ಕಾರ ಬರಗಾಲ ನಿರ್ವಹಣೆಗೆ ಕೇವಲ ೩೨೪ ಕೋಟಿ ಹಣ ಬಿಡುಗಡೆ ಮಾಡಿದ್ದು ,ಅದನ್ನು ನಿರ್ವಹಣೆ ಮಾಡುತ್ತಾರೆ ಇಲ್ಲಿಯವರೆಗೂ ಜಿಲ್ಲಾಧಿಕಾರಿ ಗಳು ,ತಹಶಿಲ್ದಾರರು ಬರಗಾಲ ವಿಕ್ಷಣೆಗೆ ಮುಂದಾಗಿಲ್ಲ .ಜಾನುವಾರು ಗಳಿಗೆ ಕುಡಿಯಲು ನೀರು ,ಮೇವು ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.ವಿದ್ಯುತ್ ಉತ್ಪಾದನೆ ಯಲ್ಲಿ ನಮ್ಮ ರಾಜ್ಯ ಮುಂದಿದೆ ನಾವು ಬಳಸಿಕೊಂಡು ಹೆಚ್ಚುವರಿ ಯಾಗಿ ಬೇರೆ ರಾಜ್ಯಗಳಿಗೆ ಕೊಡುತ್ತಿದ್ದೆವು ಆದರೆ ಈಗ ನಮ್ಮ ರಾಜ್ಯದ ಜನತೆಗೆ ಏಳು ತಾಸು ವಿದ್ಯುತ್ ಕೊಡುವುದಕ್ಕೆ ಆಗುತ್ತಿಲ್ಲ ಎಂಬುವುದು ತುಂಬಾ ಕಳವಳದ ಪ್ರಶ್ನೆ ಎಂದರು ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ರಾಜ್ಯ . ರೈತರಿಗೆ ನೀಡುತ್ತಿದ್ದ ನಾಲ್ಕು ಸಾವಿರ ರದ್ದುಪಡಿಸಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಸಲ್ಲುತ್ತದೆಂದರು.
ಮಾಜಿ ಶಾಸಕ ಪ್ರತಾಪ್ ಪಾಟೀಲ ಮಾತನಾಡಿ ಮೋಡ ಬಿತ್ತನೇ ಕಾರ್ಯದಿಂದ ರೈತರ ಬೆಳೆಗಳಿಗೆ ಲಾಭಕ್ಕಿಂತ ನಷ್ಟ ನೇ ಜಾಸ್ತಿ ಆಗಿದೆ.ಈ ಮೋಡ ಬಿತ್ತನೆ ಖಾಸಗಿ ಫೌಂಡೇಶನ್ ವತಿಯಿಂದ ಮಾಡಿದ್ದು ಕೇವಲ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಮತ್ತು ಪ್ರಚಾರದ ಗಿಟ್ಟಿಸಿಕೊಳ್ಳಲು ಮಾಡುತ್ತಿದ್ದಾರೆಂದು ಮಾತನಾಡಿದರು.
