ಉದಯವಾಹಿನಿ, ಸಿಂಧನೂರು: ಅಕಾಲಿಕ ಮಳೆ ,ಗಾಳಿ ಯಿಂದ ತಾಲೂಕಿನ ಕೆಲವು ರೈತರ ಭತ್ತ ಬೆಳೆಗಳು ನೆಲಕ್ಕೆ ಬಿದ್ದು ನಾಶವಾಗಿವೆ ಇದರಿಂದ ಸಂಕಷ್ಟಕ್ಕೆ ಎದುರಾಗಿದ್ದೆವೆಂದು ತಮ್ಮ ನೋವನ್ನು ಪತ್ರಿಕೆಯೊಂದಿಗೆ ತೋಡಿಕೊಳ್ಳುತ್ತಿದ್ದಾರೆ.ಮೋಡ ಬಿತ್ತನೆ ಪ್ರಭಾವವೋ ಅಥವಾ ಸೈಕ್ಲೋನ್ ಪರಿಣಾಮವೋ ತಿಳಿಯದು ಆದರೆ ಮಳೆಯಿಂದ ಭತ್ತ ನೆಲ್ಲಕ್ಕುರಳಿ ಖರ್ಚು ಮಾಡಿದ ಹಣ ಕೈ ಸುಟ್ಟು ಕೊಂಡಂತಾಗಿದೆ ಮತ್ತು ಇನ್ನೊಂದೆಡೆ ನೀರಿಲ್ಲದೆ ಒಣ ಬೇಸಾಯದ ಬೆಳೆಗಳಾದ ಜೋಳ ,ಹತ್ತಿ ,ತೊಗರಿ ,ಒಣಗುತ್ತಿವೆಂದು ತಮ್ಮ ನೋವು ಯಾರಿಗೆ ಹೇಳೋಣ ಎನ್ನುತ್ತಿದ್ದಾರೆ.
ತಾಲೂಕಿನ ದೇವಿಕ್ಯಾಂಪ್ ,ಗೋರೆಬಾಳ ,ಗಾಂಧಿನಗರ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿಪರೀತ ಮಳೆ ,ಗಾಳಿ ಯಿಂದ ನೂರಾರು ಎಕರೆ ನಾಶವಾಗಿದ್ದು ಇದರಿಂದ ತಹಶಿಲ್ದಾರರು ಸಂಬಂಧ ಪಟ್ಟ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಸೂಕ್ತ ನಷ್ಟ ಪರಿಹಾರ ವನ್ನು ಕೊಡಬೇಕೆಂದು ರೈತರು ಆಗ್ರಹಿಸಿದರು.
