
ಉದಯವಾಹಿನಿ ರಾಮದುರ್ಗ : ತಾಲ್ಲೂಕಿನ ಮಿನಿ ವಿಧಾನಸಭಾ ಹಿಂಭಾಗದಲ್ಲಿರುವ ಪ್ರವಾಸಿ ಮಂದಿರದಲ್ಲಿ ಇಂದು ಆಗಮಿಸಿದ ಕರ್ನಾಟಕ ಸಮಗಾರ ( ಚಮ್ಮಾರ ) ಹರಳಯ್ಯ ಸಂಘ (ರಿ) ಬೆಂಗಳೂರು, ರಾಜ್ಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಯರು ಇಂದು ರಾಮದುರ್ಗ ಪಟ್ಟಣಕ್ಕೆ ಆಗಮಿಸಿದ್ದರು ಅವರನ್ನು ರಾಮದುರ್ಗದ ಎಲ್ಲ ಸಮಗಾರ ಹರಳಯ್ಯ ಸಮಾಜದವರು ಕೂಡಿಕೊಂಡು ಅವರನ್ನು ಸ್ವಾಗತ ಮಾಡಿಕೊಂಡು ನಂತರ ಸನ್ಮಾನ ಮಾಡಿದರು.ಸಂಘದ ಸದಸ್ಯತ್ವದ ಅಭಿಯಾನ ಕಾರ್ಯಕ್ರಮವನ್ನು ಯಾದವಾಡ, ಬೈಲಹೊಂಗಲ್, ಅಥಣಿ, ಬೆಳಗಾವಿ, ಬಿಜಾಪುರ, ಮತ್ತು ಇಂದು ರಾಮದುರ್ಗದಲ್ಲಿ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಸದಸ್ಯರ ಸದಸ್ಯತ್ವವನ್ನು ನೇಮಕ ಮಾಡಿಕೊಂಡರು.ಪ್ರತಿಯೊಂದು ರಾಜ್ಯ ಜಿಲ್ಲೆ ಮತ್ತು ತಾಲೂಕಿನಲ್ಲಿ ನಮಗೆ ಸಿಗುವಂತಹ ಸೌಲಭ್ಯಗಳ ಸಲುವಾಗಿ ಹೋರಾಟ ಮಾಡಲು ನಮ್ಮ ಕರ್ನಾಟಕ ಸಮಗಾರ (ಚಮ್ಮಾರ) ಹರಳಯ್ಯ ಸಂಘದವರು ಸದಾ ನಿಮ್ಮ ಜೊತೆ ಸಿದ್ಧವಾಗಿರುತ್ತೇವೆ ಮತ್ತು ಲೀಡಕರ್ ಸಂಸ್ಥೆಗೆ ನಮ್ಮ ಸಮಾಜದವರೇ ಚೇರ್ಮನ್ ಆಗಬೇಕು ನಂತರ ನಮ್ಮ ರಾಜ್ಯದಿಂದ ಗ್ರಾಮ ಮಟ್ಟದವರೆಗೂ ನಮ್ಮ ಸಮಗಾರ ಹರಾಳಯ್ಯನ ಜಯಂತಿಯಾಗಲಿ ಹಾಗೂ ಹರಳಯ್ಯನ ಪುಣ್ಯತಿಥಿಯನ್ನು ಬರವು ದಿನಾ ಒಂದೇ ದಿವಸದಂದು ಎಲ್ಲರೂ ಕೂಡಿ ಆಚರಿಸೋಣ ಎಂದು ಸಮಗಾರ ಸಮಾಜದ ರಾಜ್ಯ ಉಪಾಧ್ಯಕ್ಷರಾದ ಪರಶುರಾಮ ಅರಕೇರಿ ಅವರು ಮಾತನಾಡಿದರು.ನಂತರ ಮಾತನಾಡಿದ ಸಮಗಾರ ಸಮಾಜದ ರಾಜ್ಯಾಧ್ಯಕ್ಷರಾದ ಜಗದೀಶ್ ಬೆಟಿಗೇರಿ ಅವರು 19 ರಿಂದ 20 ಲಕ್ಷ ನಮ್ಮ ಜನಸಂಖ್ಯೆ ಇದೆ ಸುಮಾರು 10 ರಿಂದ 15 ಲಕ್ಷ ಜನರ ಸದಸ್ಯತ್ವ ಮಾಡಬೇಕು ಮತ್ತು ಬೆಂಗಳೂರಿನ ಹೃದಯ ಭಾಗ ಅಂದರೆ ನಾಗರಬಾವಿಯಲ್ಲಿರುವ 19 ಗುಂಟೆ ಜಾಗದಲ್ಲಿ ನಮ್ಮದೊಂದು ಸಭಾಭವನ ಹಾಗೂ ಶಾಲೆ ಮತ್ತು ನಮ್ಮ ಸಮಾಜದ ಜನ ಬರುವಂತಹ ಜನರಿಗೆ ಉಳಿದುಕೊಳ್ಳುವಂತಹ ವ್ಯವಸ್ಥೆಯನ್ನು ಮಾಡ್ತಾ ಇದ್ದೀವಿ ಎಂದು ಮಾತನಾಡಿದರು.ಈ ಸಂದರ್ಭದಲ್ಲಿ ಕರ್ನಾಟಕ ಸಮಗಾರ (ಚಮ್ಮಾರ) ಹರಳಯ್ಯ ಸಂಘದ ರಾಜ್ಯಾಧ್ಯಕ್ಷರಾದ ಜಗದೀಶ್ ಬೆಟಗೇರಿ ಹಾಗೂ ಉಪಾಧ್ಯಕ್ಷರಾದ ಪರಶುರಾಮ್ ಅರಿಕೇರಿ, ಕಾರ್ಯದರ್ಶಿಯಾದ ಸುನಿಲ್ ಮದಲಬಾವಿ, ಮಂಜುನಾಥ ಹಂಜಗಿ, ಯಲ್ಲಪ್ಪ ಸಾನಕೇನ್ನವರ್, ಶ್ರೀಮತಿ ಸರೋಜ ಸಂಪಗಾವ್,ರಾಘವೇಂದ್ರ ದೊಡಮನಿ, ಪ್ರವೀಣ್ ರಾಯಬಾಗ ಹಾಗೂ ರಾಮದುರ್ಗದ ಸಮಗಾರ ಹರಳಯ್ಯ ಸಮಾಜದ ಎಲ್ಲ ಗುರು ಹಿರಿಯರು ಉಪಸ್ಥಿತರಿದ್ದರು.
