ಉದಯವಾಹಿನಿ ಇಂಡಿ: ನಗರದ ಟೀಪು ವೃತ್ತದಲ್ಲಿ ಇಂದು 272ನೇಯ ಜನ್ಮದಿನಾಚರಣೆ ಅಂಗವಾಗಿ ಹಜರತ್ ಟೀಪು ಸುಲ್ತಾನರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಗೌರವ ಸಲ್ಲಿಸಿದರು.ನಂತರ ಮಾತನಾಡುತ್ತಾ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಸ್ವಂತ ಮಕ್ಕಳನ್ನು  ಅಡವಿಟ್ಟು ದೇಶದ ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಶ್ರಮಿಸಿ ಬಲಿದಾನ ಹೂಂದಿದ ಮಹಾನ ದೇಶಪ್ರೇಮಿಯ ಜೇವನ ಇಂದಿನ ಯುವಕರಿಗೆ ಪ್ರೇರಣೆ ನೀಡಲಿ.ಹಿಂತಾ ಮಹಾನಾಯಕರಿಗೆ ಒಂದೆ ಕೂಮಿಗೆ ಸೀಮಿತ ಮಾಡದೆ ಆಳುವ ಸರ್ಕಾರಗಳು ಕೂಡಾ ನಿರ್ಲಕ್ಷ್ಯ ಧೋರಣೆ ಮಾಡದೆ ಸೂಕ್ತ ಗೌರವ ಹಾಗೂ ಇತಿಹಾಸ ಯುವಕರಿಗೆ ನೀಡುವ ಕಾರ್ಯಕ್ರಮ ನೀಡಲೇಂದು ಆಗ್ರಹಿಸಿದರು.ಇದೆ ಸಂದರ್ಭದಲ್ಲಿ ಮುಖಂಡರಾದ ಅಯೂಬ್ ನಾಟೀಕರ, ಸಿದ್ದು ಡಂಗಾ, ಮುಸ್ತಾಕ್ ನಾಯಕೋಡಿ, ನಿಯಾಝ್ ಅಗರಖೇಡ, ಇರ್ಫಾನ್ ಅಗರಖೇಡ,ಸೋಹೆಲ್ ಬಾಗವಾನ್ ಫಜಲು ಮುಲ್ಲಾ‌,ಇಸ್ಮಾಯಿಲ ಮೂನಸಿ, ಮುಜಾಮೀಲ ಬಾಗವಾನ ಹಾಗೂ ಅಪಾರ ಟೀಪು ಅಭಿಮಾನಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!