
ಉದಯವಾಹಿನಿ ಚಿತ್ರದುರ್ಗ: ಧನ್ವಂತರಿ ಜಯಂತಿ ಹಾಗೂ ರಾಷ್ಟ್ರೀಯ ಆಯುರ್ವೇದ ದಿನದ ಅಂಗವಾಗಿ ಶುಕ್ರವಾರ ಚಿತ್ರದುರ್ಗ ತಾಲ್ಲೂಕಿನ ಪಲ್ಲವಗೆರೆ ಗ್ರಾಮದಲ್ಲಿ ಜೆ.ಎನ್.ಕೋಟೆ ಸರ್ಕಾರಿ ಆಯುರ್ವೇದ ಚಿಕಿತ್ಸಾ ಕೇಂದ್ರದ ವತಿಯಿಂದ ಯೋಗ ಮತ್ತು ಆಯುರ್ವೇದ ಕುರಿತು ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಬಗ್ಗೆ ಮಾತನಾಡಿದ ಯೋಗ ಗುರು ರವಿ ಕೆ.ಅಂಬೇಕರ್ “ದೇವತೆಗಳು ಮತ್ತು ರಾಕ್ಷಸರು ಸಮುದ್ರವನ್ನು ಮಂಥನ ಮಾಡಿದಾಗ ಭಗವಾನ್ ಧನ್ವಂತರಿ ಹೊರಹೊಮ್ಮಿದನು. ಈ ಪ್ರಕ್ರಿಯೆಯಲ್ಲಿ ಅವನು ತನ್ನ ಕೈಯಲ್ಲಿ ಅಮೃತದ ಪಾತ್ರೆಯೊಂದಿಗೆ ಬಂದನು. ಜೀವಿಗಳನ್ನು ಅಕಾಲಿಕ ಮರಣ, ರೋಗಗಳು ಮತ್ತು ದುಃಖಗಳಿಂದ ರಕ್ಷಿಸಲು ಅವನು ಜನಿಸಿದನು ಎಂದು ನಂಬಲಾಗಿದೆ. ಧನ್ವಂತ್ರಿ ಎಂಬ ಪದದಲ್ಲಿ ಉಲ್ಲೇಖಿಸಲಾದ ‘ಧನು’ ದುಃಖವನ್ನು ಸಂಕೇತಿಸುತ್ತದೆ ಮತ್ತು ಧನ್ವಂತ್ರಿ ಎಂದರೆ ದುಃಖಗಳ ಅಥವಾ ರೋಗಗಳ ನಾಶಕ ಎಂದರ್ಥವಾಗಿದೆ ಆದ್ದರಿಂದ ಧನ್ವಂತರಿಯ ಜನ್ಮದಿನವನ್ನು ಆಯುರ್ವೇದ ದಿನವನ್ನಾಗಿ ಆಚರಿಅಲಾಗುತ್ತದೆ. ಆಯುರ್ವೇದ ಮತ್ತು ಯೋಗ ಒಂದೇ ನಾಣ್ಯದ ಎರಡು ಮುಖಗಳಾಗಿವೆ ಆಯುರ್ವೇದ ಗಿಡಮೂಲಿಕೆಗಳ ಮೂಲಕ ಯಾವುದೇ ರೋಗಗಳನ್ನು ವಾಸಿಮಾಡಬಹುದಾಗಿದೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಯುರ್ವೇದ ಔಷಧದ ಕಡೆ ಗಮನ ಹರಿಸಬೇಕು ಅದಕ್ಕಾಗಿ ಇಂದು ಆಯುರ್ವೇದ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.ಶಾಲಾ ವಿಧ್ಯಾರ್ಥಿಗಳು ಜಾಗೃತಿ ಜಾಥದ ಉದ್ಧಕ್ಕೂ ಯೋಗ ಮತ್ತು ಆಯುರ್ವೇದದ ಬಗ್ಗೆ ಘೋಷಣೆ ಕೂಗುತ್ತಾ ಜನರಲ್ಲಿ ಜಾಗೃತಿ ಮೂಡಿಸಿದರು. ಈ ಸಂಧರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ನರಸಿಂಹಪ್ಪ ಉಪಸ್ಥಿತರಿದ್ದರು.
