ಉದಯವಾಹಿನಿ ,ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರ ಆಯ್ಕೆಯಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಫಲಿತಾಂಶ ಬಂದು ಆರು ತಿಂಗಳ ನಂತರ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿ ಬಿಜೆಪಿ ಪ್ರಜಾಪ್ರಭುತ್ವಕ್ಕೆ ಗೌರವ ಕೊಟ್ಟಿದೆ.ನಮ್ಮ ಸರ್ಕಾರವನ್ನು ಹೇಗೆ? ಕಿತ್ತೊಗೊಯ್ಯುತ್ತಾರೆ. ಅವರಲ್ಲಿರುವ ಭಿನ್ನತೆಯನ್ನು ಸರಿಪಡಿಸಿಕೊಂಡು ಜೋಡಿಸಿಕೊಳ್ಳಲಿ ಎಂದು ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಆರ್.ಅಶೋಕ್ ಅವರಿಗೆ ಅಭಿನಂದಿಸುತ್ತೇನೆ. ಈ ಆಯ್ಕೆಯಿಂದ ಕಾಂಗ್ರೆಸ್‍ಗೆ ಖುಷಿಯಾಗಿದೆ. ಆದರೆ ಬಿಜೆಪಿಗೆ ಸಂತೋಷವಿಲ್ಲ. ಚಾಪ್ಟರ್-2 ಸುಲಭವಾಗಲಿದೆ ಎಂದರು.
