ಉದಯವಾಹಿನಿ, ಈಗಂತೂ ಚಳಿಗಾಲದ ಹವಾಮಾನಕ್ಕೆ ವಾತಾವರಣ ಸಂಪೂರ್ಣ ಬದಲಾಗಿದ್ದು ಹವಾಮಾನ ವೈಪರಿತ್ಯದಿಂದ ಶೀತ , ಕೆಮ್ಮು, ಜ್ವರ ಇತರ ವೈರಲ್ ಜ್ವರಗಳು ಕಂಡು ಬರುವ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಈ ಕಾಲದಲ್ಲಿ ಚಳಿಗಾಲಕ್ಕೆ ಒಗ್ಗಿಕೊಳ್ಳುವ ಆಹಾರ ಕ್ರಮಕ್ಕೆ ಅಧಿಕ ಪ್ರಾತಿನಿಧ್ಯ ನೀಡಬೇಕು. ಇದರಿಂದಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಅದರ ಜೊತೆಗೆ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ ಸಿಗುವ ಕಾರಣ ಕೆಲವು ಸಾಂಕ್ರಾಮಿಕ ರೋಗ ಬರಲಾರದು. ಅಂತಹ ಆಹಾರದಲ್ಲಿ ಸಿಹಿಗೆಣಸು ಕೂಡ ಒಂದು.ಸಿಹಿ ಗೆಣಸಿನಲ್ಲಿ ಹೆಚ್ಚು ಪೌಷ್ಟಿಕಾಂಶವಿದೆ. ಅದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ಮ್ಯಾಂಗನೀಸ್‌ನಿಂದ ಪ್ರಮಾಣ ಹೇರಳವಾಗಿದ್ದು ಇದರ ಸೇವನೆಯಿಂದ ದೇಹದ ಆರೋಗ್ಯಕ್ಕೆ ಅನೇಕ ಪ್ರಯೋಜನೆ ಸಿಗಲಿದೆ. ಸಿಹಿ ಗೆಣಸಿನಲ್ಲಿ ಕ್ಯಾನ್ಸರ್ ನಿರ್ಮೂಲನೆಯ ಪೌಷ್ಟಿಕಾಂಶ ಇದೆ ಎಂದು ಅಧ್ಯಯನ ಗಳಲ್ಲಿಯೂ ತಿಳಿಸಲಾಗಿದೆ. *ಸಿಹಿ ಗೆಣಸಿನಲ್ಲಿ ಕರಗುವ ಮತ್ತು ಕರಗದ ಎರಡು ರೀತಿಯ ಫೈಬರ್ ಅಂಶ ಇರಲಿದೆ. ಹೆಚ್ಚಿನ ಫೈಬರ್ ಅಂಶವು ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ತಡೆಯಲು ಕೂಡ ಸಹಾಯ ಮಾಡುತ್ತದೆ.
*ಹೆಚ್ಚಿನ ವಿಟಮಿನ್ ಸಿ ಅಂಶವಿದ್ದು ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
*ಮಧುಮೇಹ ನಿಯಂತ್ರಣವಾಗಿ ಪರಿಣಾಮಕಾರಿಯಾಗಿದೆ. ಸಿಹಿಯಾಗಿದ್ದರೂ ಸಹ, ಇದರ ‘ಗ್ಲೈಸೆಮಿಕ್ ಇಂಡೆಕ್ಸ್’ ಕಡಿಮೆ ಇರುವುದರಿಂದ ಇದು ಸಕ್ಕರೆ ಮಟ್ಟವನ್ನು ಇದ್ದಕ್ಕಿದ್ದಂತೆ ಹೆಚ್ಚಿಸುವುದಿಲ್ಲ ಹೀಗಾಗಿ ಡಯಾಬಿಟಿಸ್ ಕಂಟ್ರೋಲ್ ಆಗಲಿದೆ.
*ಸಿಹಿ ಗೆಣಸು ವಿಟಮಿನ್ ಎ ಮತ್ತು ಸಿ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ6, ಮ್ಯಾಂಗನೀಸ್ ಮತ್ತು ನಿಯಾಸಿನ್ ಹಾಗೂ ನಾರಿನ ಅಂಶ ಇದ್ದ ಕಾರಣ ಹೆಚ್ಚಿನ ಆರೋಗ್ಯ ಪ್ರಯೋಜನೆ ಸಿಗಲಿದೆ.*ಸಿಹಿ ಗೆಣಸಿನಲ್ಲಿ ಬೀಟಾ-ಕ್ಯಾರೋಟಿನ್ ಅಂಶ ಇದ್ದು ಇದರಿಂದಾಗಿ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗಲಿದೆ.
*ಸಿಹಿ ಗೆಣಸಿನಲ್ಲಿರುವ ಜೀವಸತ್ವಗಳು ವಯಸ್ಸಿಗೆ ಸಂಬಂಧಿಸಿದ ದೃಷ್ಟಿ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
*ಇದು ಉತ್ಕರ್ಷಣ ನಿರೋಧಕವಾಗಿದ್ದು ಚರ್ಮದ ಆರೋಗ್ಯವನ್ನು ಸುಧಾರಿಸಲಿದೆ.*ಸಿಹಿಗೆಣಸು ತಿಂದಾಗ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರಿಂದ ಪದೇ ಪದೇ ಹಸಿವಾಗುವುದು ಕಡಿಮೆಯಾಗಿ, ತೂಕ ಇಳಿಸಲು ಪ್ರಯತ್ನಿಸುತ್ತಿರುವವರಿಗೆ ಇದು ಉತ್ತಮ ಆಹಾರವಾಗಿದೆ.*ನೈಸರ್ಗಿಕವಾಗಿ ಗ್ಲುಟನ್-ಮುಕ್ತವಾಗಿರುವುದರಿಂದ ಉದರದ ಕಾಯಿಲೆ (ಹೊಟ್ಟೆ ನೋವು) ಇರುವವರಿಗೆ ಈ ಆಹಾರ ಚಳಿಗಾಲಕ್ಕೆ ಉತ್ತಮ ಆಯ್ಕೆಯಾಗಿದೆ.
