ಉದಯವಾಹಿನಿ, ದೇಹದಲ್ಲಿನ ಹೆಚ್ಚುವರಿ ತೂಕವನ್ನು ಬೇಗನೆ ಕಡಿಮೆ ಮಾಡಿಕೊಳ್ಳಬೇಕು ಅನ್ನೋ ಗುರಿಯನ್ನು ಹೊಂದಿದ್ದರೆ, ಕಟ್ಟುನಿಟ್ಟಾದ ಡಯಟ್ ಜೊತೆಗೆ ಜೀವನಶೈಲಿ ಎಂದರೆ ಲೈಫ್‌ಸ್ಟೈಲ್ ಸಹ ಬದಲಾಯಿಸಿಕೊಳ್ಳಬೇಕಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳಬೇಕು ಅಂತ ಬರೀ ಜಿಮ್‌ಗೆ ಹೋಗಿ ಗಂಟೆಗಟ್ಟಲೆ ಕಠಿಣವಾದ ತಾಲೀಮು ನಡೆಸಿದರೆ ಸಾಲದು, ಅದರ ಜೊತೆಗೆ ಊಟದ ಮೇಲೆ ನಿಯಂತ್ರಣ ಮತ್ತು ಅಗತ್ಯವಾದ ಜೀವನಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವುದು ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತುಂಬಾನೇ ಸಹಾಯಕವಾಗಿರುತ್ತದೆ.
ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಆದಂತಹ ಡಾ. ರೋಹನ್ ಬಡಾವೆ, ಸಮತೋಲಿತ ಊಟದ ಮೂಲಕ ನೀವು ಕ್ಯಾಲೋರಿ ಸೇವನೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದು ಎಂದು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದರು. ಜೀವನಶೈಲಿಯ ಪರಿಣಾಮಕಾರಿ ನಿರ್ವಹಣೆಯ ಮೂಲಕ ವ್ಯಕ್ತಿಯು ತಮ್ಮ ದೇಹದ ತೂಕದ ಮೇಲೆ ನಿಯಂತ್ರಣ ಸಾಧಿಸಬಹುದು ಎಂದು ಡಾ. ರೋಹನ್ ಹೈಲೈಟ್ ಮಾಡಿದ್ದಾರೆ.

ಆರೋಗ್ಯಕರ ಆಹಾರ ಪದ್ಧತಿಯನ್ನು ಯೋಜಿಸಿ ರೂಪಿಸಿಕೊಳ್ಳಬೇಕು ಎಂದು ಡಾ. ರೋಹನ್ ಹೇಳುತ್ತಾರೆ. ಇದು ದೇಹಕ್ಕೆ ಸಾಕಷ್ಟು ಪೋಷಣೆಯನ್ನು ಒದಗಿಸುತ್ತದೆ. ‘ಸಿಹಿ ತಿಂಡಿಗಳು, ಕರಿದ ಆಹಾರಗಳು, ಚೀಸ್ ಮತ್ತು ಬೆಣ್ಣೆ ಸೇರಿದಂತೆ ಕಡಿಮೆ ಅಥವಾ ಯಾವುದೇ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರದ ಹೆಚ್ಚಿನ ಕ್ಯಾಲೋರಿ ಹೊಂದಿರುವ ಆಹಾರಗಳನ್ನು ಸೇವಿಸುವುದನ್ನು ಮಿತಿ ಗೊಳಿಸುವುದು ಸಹಾಯಕವಾಗಿದೆ’ ಅಂತ ಅವರು ಹೇಳುತ್ತಾರೆ. ಅವರ ಪ್ರಕಾರ, ಈ ಆಹಾರ ಪದಾರ್ಥಗಳನ್ನು ‘ವಿಶೇಷ ಸಂದರ್ಭಗಳಲ್ಲಿ ಮಾತ್ರವೇ ಸೇವಿಸಬೇಕು’. ಡಾ. ರೋಹನ್ ಅವರು ಊಟವನ್ನು ಸಮತೋಲನಗೊಳಿಸಬೇಕು ಎಂದು ಹೇಳುತ್ತಾರೆ. ಅವರ ಪರಿಣತಿಯ ಪ್ರಕಾರ, ಪೌಷ್ಟಿಕಭರಿತವಾದ ಊಟವು ಒಂದು ರೊಟ್ಟಿ ಅಥವಾ ಸಣ್ಣ ಪ್ರಮಾಣದಲ್ಲಿ ಅನ್ನ, ಎರಡರಿಂದ ಮೂರು ಬಟ್ಟಲು ತರಕಾರಿಗಳು ಅಥವಾ ಬೇಳೆಗಳನ್ನು ಒಳಗೊಂಡಿರಬೇಕು.

‘ಬಹಳಷ್ಟು ಜನರು ತಮ್ಮ ತಟ್ಟೆಯಲ್ಲಿ ಹೆಚ್ಚಾಗಿ ಅನ್ನ ಅಥವಾ ರೊಟ್ಟಿಯನ್ನು ಹಾಕಿಕೊಂಡು, ತಟ್ಟೆಯಲ್ಲಿ ಕಡಿಮೆ ಅಥವಾ ತರಕಾರಿಗಳನ್ನು ಹೊಂದಿರದಿರುವುದರಿಂದ ಇದಕ್ಕೆ ವಿರುದ್ಧವಾಗಿ ಮಾಡುತ್ತಿದ್ದಾರೆ’ ಎಂದು ಡಾ. ರೋಹನ್ ಅವರು ದೂರಿದರು. ನೀವು ನಿಮ್ಮ ಊಟವನ್ನು ಸಮತೋಲನಗೊಳಿಸಿದರೆ ‘ನಿಮ್ಮ ಫೈಬರ್ ಸೇವನೆಯನ್ನು ಹೆಚ್ಚಿಸಬಹುದು’ ಎಂದು ಅವರು ಹೇಳುತ್ತಾರೆ. ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ನೀವು ಸೇವಿಸುವ ಒಟ್ಟಾರೆ ಕ್ಯಾಲೋರಿಗಳ ಸಂಖ್ಯೆಯನ್ನು ನಿಯಂತ್ರಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

Leave a Reply

Your email address will not be published. Required fields are marked *

error: Content is protected !!