ಉದಯವಾಹಿನಿ, ಬೆಂಗಳೂರು : ಮುಂದಿನ ವರ್ಷ ನಡೆಯುವಂತಹ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಕೂಡ ಭರ್ಜರಿ ಸಿದ್ಧತೆಗಳನ್ನ ಮಾಡಿಕೊಳುತ್ತಿವೆ.
ಬಿಜೆಪಿ ಜೆಡಿಎಸ್ ಪಕ್ಷಗಳಲ್ಲಿ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಪರೇಷನ್ ಹಾಗೂ ಕೋ ಆಪರೇಷನ್ ಗೆ ಚುರುಕು ನೀಡಿದ ಉಪಮುಖ್ಯಮಂತ್ರಿ ಡಿಗೆ ಶಿವಕುಮಾರ್ ಹಾಲಿ ಶಾಸಕರನ್ನೇ ಮತ್ತೆ ಕಾಂಗ್ರೆಸ್ ಕಡೆಗೆ ಸೆಳೆಯಲು ಡಿಕೆ ಶಿವಕುಮಾರ್ ಕಸರತ್ತು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅದರಲ್ಲೂ ಹಳೆ ಮೈಸೂರು ಭಾಗದ ಹಾಲಿ ಶಾಸಕರಿಗೆ ಕಾಳಹಾಕಲಾಗುತ್ತಿದೆ.ಬಿಜೆಪಿ ಶಾಸಕರು ಕಾಂಗ್ರೆಸ್ಗೆ ಬಂದೇ ಬರುವ ವಿಶ್ವಾಸದಲ್ಲಿ ಡಿಕೆ ಶಿವಕುಮಾರ್ ಇದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ಗೆ ತರಲು ಅಹ್ವಾನ ನೀಡಲಾಗಿದೆ. ಆಹ್ವಾನದ ಹಿಂದಿನ ವಿಚಾರ ಡಿಕೆ ಶಿವಕುಮಾರ ಅವರ ಬಹು ದೊಡ್ಡ ರಾಜಕೀಯ ತಂತ್ರಗಾರಿಕೆ ಎನ್ನಲಾಗುತ್ತಿದೆ.
ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಿಂದ ತೊಡಕ್ಕಾಗಬಹುದು.ಹಳೆ ಮೈಸೂರು ಭಾಗದಲ್ಲಿ ಹಾಲಿ ಶಾಸಕರ ಕೋ ಆಪರೇಷನ್ ಸಿಕ್ಕಿದರೆ ಜೆಡಿಎಸ್ ಗೆ ಮರ್ಮಾಘಾತ ನೀಡಬಹುದೆಂಬುದು ಡಿಕೆ ಶಿವಕುಮಾರ್ ಅವರ ಲೆಕ್ಕಾಚಾರವಾಗಿದೆ.
