ಉದಯವಾಹಿನಿ, ವಿಜಯಪುರ: ಗೋದಾಮಿನಲ್ಲಿ ಮೆಕ್ಕೆಜೋಳ ಕುಸಿದ ಪರಿಣಾಮ ಬಿಹಾರ ಮೂಲದ ಸುಮಾರು ೭ ಕರ‍್ಮಿಕರು ಮೂಟೆ ಅಡಿ ಸಿಲುಕಿ ಸಾವನಪ್ಪಿದ ದುರಂತ ನಗರ ಹೊರ ವಲಯದ ಅಲಿಯಾಬಾದ ಬಳಿ ಗೋದಾಮಿನಲ್ಲಿ ಸಂಭವಿಸಿದೆ.ಪೂನಾದಿಂದ ಆಗಮಿಸಿದ ೩೦ ಎನ್‍ಡಿಆರ್‍ಎಫ್ ಹಾಗೂ ಕಲಬುರಗಿಯ ಎಸ್‍ಡಿಆರ್‍ಎಫ್ ತಂಡಗಳು ೨ ಜೆಸಿಬಿ, ೨ ಕ್ರೇನ್ ಬಳಸಿ ಮೂಟೆ ಅಡಿ ಸಿಲುಕಿದ ಕರ‍್ಮಿಕರ ಶೋಧ ಕರ‍್ಯಾಚರಣೆಯನ್ನು ನಿನ್ನೆ ಸಂಜೆ ೬ ಗಂಟೆಯಿಂದ ಆರಂಭಿಸಿ ರ‍್ವ ಕರ‍್ಮಿಕನನ್ನು ರಕ್ಷಣೆ ಮಾಡಿದ್ದು, ೬ ಕರ‍್ಮಿಕರ ಶವಗಳನ್ನು ಹೊರ ತಗೆದಿದ್ದಾರೆ. ಇನ್ನಿಬ್ಬರು ಕರ‍್ಮಿಕರ ಶೋಧಕರ‍್ಯ ಮುಂದುವರೆದಿದೆ.
ರಾಜೇಶ ಮುಖಿಯಾ (೨೫), ರಾಮ್ರೀಜ ಮುಖಿಯಾ (೨೯), ಸಂಬೂ ಮುಖಿಯಾ (೨೬), ರಾಮ ಬಾಲಕ (೫೨), ಲುಖೋ ಜಾಧವ (೪೫) ಎಂಬುವರ ಶವಗಳನ್ನು ಹೊರ ತಗೆಯಲಾಗಿದೆ. ಇನ್ನಿಬ್ಬರ ಹೆಸರು ತಿಳಿದು ಬಂದಿಲ್ಲ.

Leave a Reply

Your email address will not be published. Required fields are marked *

error: Content is protected !!