ಉದಯವಾಹಿನಿ , ಇತ್ತೀಚೆಗೆ Eggozನಂತಹ ಕೆಲವು ಮೊಟ್ಟೆ ಬ್ರ್ಯಾಂಡ್‌ಗಳಲ್ಲಿ ಹಾನಿಕಾರಕ ರಾಸಾಯನಿಕಗಳಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಲ್ಲಿ ಹರಿದಾಡಿತ್ತು. ಹಾಗಾದ್ರೆ ಮೊಟ್ಟೆ ಸೇವನೆ ಮಾಡುವುದು ಬೇಕಾ ಬೇಡ್ವಾ ಎನ್ನುವ ಪ್ರಶ್ನೆಗೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಆಹಾರ ತಜ್ಞೆ ಡಾ. ಸುನಿತಾ ಎನ್‌. ಉತ್ತರಿಸಿದ್ದಾರೆ ನಾರುಯುಕ್ತ ಆಹಾರಗಳೊಂದಿಗೆ ಮೊಟ್ಟೆಯನ್ನು ಮಿತವಾಗಿ ಸೇವಿಸೋದ್ರಿಂದ ಆರೋಗ್ಯವು ಸುರಕ್ಷಿತ. ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುವ ಮಾಹಿತಿಗಳನ್ನು ಕಂಡು ಭಯ ಪಡುವುದಕ್ಕಿಂತ ಸಮತೋಲಿತ ಆಹಾರ, ಉತ್ತಮ ಜೀವನಶೈಲಿ ಮತ್ತು ಸಕಾರಾತ್ಮಕ ಮನಸ್ಥಿತಿ ಬೆಳೆಸಿಕೊಳ್ಳುವುದು ಮುಖ್ಯ ಎನ್ನುತ್ತಾರೆ ಅವರು.
ಕೋಳಿ ಸಾಕಾಣಿಕೆಯಲ್ಲಿ ರೋಗಗಳನ್ನು ತಡೆಗಟ್ಟಲು ಮತ್ತು ಮೊಟ್ಟೆಯ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ‘ನೈಟ್ರೋಫ್ಯೂರಾನ್’ ನಂತಹ ಔಷಧಿಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿದೆ ಎಂದು ಸಂಶೋಧನೆಗಳು ಹೇಳುತ್ತವೆ ಆದ್ರೆ ಸರಿಯಾದ ಆಹಾರ ಕ್ರಮದ ಮೂಲಕ ನಾವು ಈ ಅಪಾಯದಿಂದ ದೂರ ಉಳಿಯಬಹುದು ಎಂದು ಡಾ. ಸುನಿತಾ ವಿವರಿಸಿದರು.
ಮೊಟ್ಟೆಗಳನ್ನು ನೇರವಾಗಿ ಸೇವಿಸುವ ಬದಲು ನಾರುಯುಕ್ತ ತರಕಾರಿಗಳೊಂದಿಗೆ ಸೇವಿಸುವುದರಿಂದ ಎದುರಾಗಲಿರುವ ಹಾನಿಯನ್ನು ಕ್ರಮೇಣ ತಡೆಗಟ್ಟಬಹುದು. ಉದಾಹರಣೆಗೆ ಮೊಟ್ಟೆಯನ್ನು ಆಮ್ಲೆಟ್ ಅಥವಾ ಸಲಾಡ್ ರೂಪದಲ್ಲಿ ತರಕಾರಿಗಳೊಂದಿಗೆ ಸೇವಿಸಿದಾಗ ತರಕಾರಿಗಳಲ್ಲಿರುವ ಆ್ಯಂಟಿ-ಆಕ್ಸಿಡೆಂಟ್‌ಗಳು ದೇಹದ ಡಿಎನ್ಎ ಮೇಲೆ ಪರಿಣಾಮ ಬೀರಬಹುದಾದ ಹಾನಿಕಾರಕ ಫ್ರೀ ರಾಡಿಕಲ್‌ಗಳನ್ನು ತಟಸ್ಥಗೊಳಿಸುತ್ತವೆ ಎಂದು ತಜ್ಞರು ಮಾಹಿತಿ ಹಂಚಿಕೊಂಡರು.

Leave a Reply

Your email address will not be published. Required fields are marked *

error: Content is protected !!