ಉದಯವಾಹಿನಿ , ಅನೇಕ ಜನರಿಗೆ ಮುಖದ ಮೇಲೆ ಕಪ್ಪು ಕಲೆಗಳು ಸಾಮಾನ್ಯವಾಗಿ ಮೊಡವೆಗಳಿಂದ ಉಂಟಾಗುತ್ತವೆ. ಚರ್ಮದ ಅಂಗಾಂಶ ಹಾನಿಗೊಳಗಾದಾಗ ಹಾಗೂ ಕಾಲಜನ್ ಸರಿಯಾಗಿ ರೂಪುಗೊಳ್ಳದಿರುವುದು ಮೊಡವೆಗಳಿಗೆ ಕಾರಣವಾಗುತ್ತದೆ. ಹಲವು ಜನರಿಗೆ ಮೊಡವೆಗಳ ಸಮಸ್ಯೆ ಕಾಡುತ್ತದೆ.
ಕೆಲವು ಜನರು ಇವುಗಳು ಒಡೆದುಕೊಂಡು ಕೀವು ಹೊರಗೆ ಹಾಕುತ್ತಾರೆ. ನಂತರ ಇವುಗಳು ಕಪ್ಪು ಕಲೆಗಳಾಗಿ ರೂಪಗೊಳ್ಳುತ್ತವೆ. ಈ ಕಲೆಗಳು ಮುಖದ ಮೇಲೆ ಕೆಟ್ಟದಾಗಿ ಕಾಣಿಸುತ್ತವೆ, ಇವುಗಳನ್ನು ಹೋಗಲಾಡಿಸಲು ವಿವಿಧ ಪ್ರಯತ್ನಗಳಿಗೆ ಮುಂದಾಗುತ್ತಾರೆ. ನೀವು ಕೂಡ ಮುಖದ ಮೇಲೆ ಮೊಡವೆಗಳಿಂದ ಸಮಸ್ಯೆ ಅನುಭವಿಸುತ್ತಿದ್ದರೆ ಹಾಗೂ ಅವುಗಳನ್ನು ತೆಗೆದುಹಾಕಲು ಬಯಸಿದರೆ, ಜೇನುತುಪ್ಪ, ಅಲೋವೆರಾ, ತೆಂಗಿನ ಎಣ್ಣೆ ಮತ್ತು ಕಡಲೆ ಹಿಟ್ಟು ಹಾಗೂ ಹಾಲು ಬಳಸುವುದು ಪರಿಣಾಮಕಾರಿಯಾಗಬಹುದು ಎಂದು ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ.
ಆರೋಗ್ಯ ತಜ್ಞರು ತಿಳಿಸುವ ಪ್ರಕಾರ, ಕೆಮಿಕಲ್ ಪೀಲಿಂಗ್ (ಚರ್ಮದ ವಿನ್ಯಾಸ ಮತ್ತು ಸ್ವರವನ್ನು ಸುಧಾರಿಸಲು ಮುಖ, ಕುತ್ತಿಗೆ ಅಥವಾ ಕೈಗಳಿಗೆ ರಾಸಾಯನಿಕ ದ್ರಾವಣವನ್ನು ಅನ್ವಯಿಸುವ ಸೌಂದರ್ಯವರ್ಧಕ ಚಿಕಿತ್ಸೆ) ಹಾಗೂ ಮೈಕ್ರೋನೀಡ್ಲಿಂಗ್‌ನಂತಹ ವೈದ್ಯಕೀಯ ಚಿಕಿತ್ಸೆಗಳು ಲಭ್ಯ ಇವೆ. ಕೆಲವು ಜನರು ತೀವ್ರವಾದ ಮೊಡವೆಗಳ ಸಮಸ್ಯೆಯಿಂದ ಬಳಲುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಅವಶ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.
ಮುಖದ ಮೇಲಿನ ಮೊಡವೆಗಳಿಗೆ ನೈಸರ್ಗಿಕ ಪರಿಹಾರಗಳೇನು?: ಮುಖದ ಮೇಲಿನ ಮೊಡವೆಗಳನ್ನು ಹೋಗಲಾಡಿಸಲು ಅಲೋವೆರಾ ಜೆಲ್ ಅನ್ನು ನೇರವಾಗಿ ಮೊಡವೆಗಳಿಗೆ ಹಚ್ಚಬೇಕಾಗುತ್ತದೆ. ವಿಟಮಿನ್ ಇ ಕ್ಯಾಪ್ಸುಲ್ ಸೇರಿಸುವುದರಿಂದ ಪ್ರಯೋಜನಗಳು ಮತ್ತಷ್ಟು ಹೆಚ್ಚುತ್ತದೆ.
ಜೇನುತುಪ್ಪ ಮತ್ತು ದಾಲ್ಚಿನ್ನಿ ಪುಡಿಯ ಪೇಸ್ಟ್ ಮಾಡಿ ಹಚ್ಚಿ ಇದು ಮೊಡವೆಗಳನ್ನು ಕಡಿಮೆ ಮಾಡುತ್ತದೆ.
ತೆಂಗಿನ ಎಣ್ಣೆ ಸಹ ಪ್ರಯೋಜನಕಾರಿಯಾಗಿದೆ. ಇದು ಚರ್ಮವನ್ನು ತೇವಗೊಳಿಸುತ್ತದೆ. ಮೊಡವೆಗಳನ್ನು ಗುಣಪಡಿಸಲು ತುಂಬಾ ಸಹಾಯಕಾರಿಯಾಗಿದೆ. ಈ ಮಿಶ್ರಣವನ್ನು ನಿಯಮಿತವಾಗಿ ಹಚ್ಚಬೇಕು.
