ಉದಯವಾಹಿನಿ, ಕೋಲಾರ: ಕರ್ನಾಟಕ ರೈತ ಸುರಕ್ಷಿತ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ವಿಮಾ ಸೌಲಭ್ಯ ಪ್ರಯೋಜನಗಳನ್ನು ಎಲ್ಲಾ ರೈತರು ಸದುಪಯೋಗ ಪಡಿಸಿಕೊಳ್ಳುವ ರೀತಿ ಕಂದಾಯ ಇಲಾಖೆಗೆ ಕಾರ್ಯನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಬೆಳೆ ಕಟಾವು ಪ್ರಯೋಜನಗಳ ಪರಿಣಾಮಕಾರಿ ಅನುಷನಕ್ಕಾಗಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಯೋಜನೆ ಕೃಷಿ ಇಲಾಖೆಯಿಂದ ಅನಷನಗೊಳಿಸಲಾಗಿದ್ದು, ಇದರ ಮುಖ್ಯ ಉದ್ದೇಶ ರೈತರ ಬೆಳೆ ವಿಮೆ ನಷ ಪರಿಹಾರವನ್ನು ಇತ್ಯರ್ಥಪಡಿಸುವುದು. ಇದಕ್ಕೆ ಮುಖ್ಯ ಆಧಾರ ಬೆಳೆ ಕಟಾವು ಪ್ರಯೋಗಗಳಿಂದ ಬಂದ ಹಸಿ ಇಳುವರಿ (೫೫/೧೦೫) ಮೀಟರ್ ಮಾಹಿತಿಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಕೃಷಿ ಇಲಾಖೆಯು ಬೆಳೆವಾರು, ವಿಮ ಘಟಕವಾರು, ಋತುವಾರು, ಅಧಿಸೂಚಿಸಿದ ಅಧಿಸೂಚನೆಯಂತೆ ಬೆಳೆ ಕಟಾವು ಪ್ರಯೋಗಗಳ ಕಾರ್ಯಯೋಜನೆ ಮೂಲಕಾರ್ಯಕರ್ತರಿಗೆ ಹಂಚಿಕೆ ಮತ್ತು ಮೇಲ್ವಿಚಾರಣೆ ಕೈಗೊಳ್ಳುವುದು. ಬೆಳೆ ಕಟಾವು ಪ್ರಯೋಗಗಳಿಂದ ಬಂದ ಹಸಿ ಇಳುವರಿಯನ್ನು ಆಧರಿಸಿ ಬೆಳೆವಾರ, ವಿಮಾ ಘಟಕವಾರು ಸರಾಸರಿ ಇಳುವರಿಯನ್ನು ಸಿದ್ಧಪಡಿಸಿ ಕೃಷಿ ಇಲಾಖೆಗೆ ನೀಡುವುದು ಮತ್ತು ಸಂರಕ್ಷಣೆ ಪೋರ್ಟಲ್‌ಗೆ ಅಪ್ಲೋಡ್ ಮಾಡುವುದು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಸಹಜವಾಗಿ ಬೆಳೆಯು ಬಿತ್ತನೆಯಾದ ಕನಿಷ ೨೦ ದಿನಗಳ ನಂತರ ನಮೂನೆ-೧ನ್ನು ಅಪ್ಲೋಡ್ ಮಾಡುತ್ತಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!