ಉದಯವಾಹಿನಿ, ಗೌರಿಬಿದನೂರು: ನಗರದ ಹಿರೇಬಿದನೂರಿನಲ್ಲಿನ ರಾಮಲಿಂಗೇ ಶ್ವರ ಸ್ವಾಮಿಯ 26ನೇ ರಥೋತ್ಸವವು ಕಾರ್ತಿಕ ಮಾಸದ ಕೊನೆಯ ಸೋಮವಾರದ ಅಂಗವಾಗಿ ಅದ್ದೂರಿ ಯಾಗಿ ನಡೆಯಿತು. ಭಾನುವಾರ ಬೆಳಿಗ್ಗೆಯಿಂದಲೇ ರಥೋತ್ಸವಕ್ಕೆ ಸಂಬಂಧಿಸಿದಂತೆ ದೇವಾ ಲಯದಲ್ಲಿ ಕಳಶಪೂಜೆ, ಮಹಾರುದ್ರ ಹೋಮ, ರುದ್ರಾಭಿಷೇಕ, ಪುಷ್ಪ ಪಂಚಾಭಿಷೇಕ ಸೇರಿದಂತೆ ಇತರ ವಿಶೇಷ ಪೂಜಾ ಕೈಂಕಾರ್ಯಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಭಾನುವಾರ ರಾತ್ರಿ ಸ್ವಾಮಿಗೆ ಗಿರಿಜಾ ಕಲ್ಯಾಣ ನಡೆಯಿತು.ಸೋಮವಾರ ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸ್ವಾಮಿಯ 26ನೇ ರಥೋತ್ಸವಕ್ಕೆ ಚಾಲನೆ ದೊರೆಯಿತು. ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ರಥೋತ್ಸವದಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥಗಳನ್ನು ದೇವರಲ್ಲಿ ಬೇಡಿಕೊಂಡು ರಥಕ್ಕೆ ಬಾಳೆಹಣ್ಣು, ದವನವನ್ನು ಎಸೆದರು. ದೇವಾಲಯ ಸಮಿತಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿತ್ತು.
ಗೌರಿಬಿದನೂರು ನಗರ ಸೇರಿದಂತೆ ತಾಲ್ಲೂಕಿನ ವಿವಿಧೆಡೆಗಳಿಂದ ಭಕ್ತಾದಿಗಳು ಆಗಮಿಸಿದ್ದರು.
