ಉದಯವಾಹಿನಿ, ಕಲಬುರಗಿ: ನಗರದ ಬ್ರಹ್ಮಪುರ ಸಂಗಮೇಶ್ವರ ಕಾಲೋನಿಯ ಸೂರ್ಯನಾರಾಯಣ ಮಂದಿರದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಪ್ರತಿ ದಿನ ಸಂಜೆ ಸೂರ್ಯನಾರಾಯಣನಿಗೆ ದಾಮೋದರ ಸ್ತುತಿಯೊಂದಿಗೆ ಮಹಾಮಂಗಳಾರತಿ,ಶ್ರೀನಾರಾಯಣ ಉಪನಿಷತ್‍ನೊಂದಿಗೆ ಮಂತ್ರಪುಷ್ಪವು ಗುರುದ್ವಯರ ಮಹಾಸನ್ನಿಧಾನದಲ್ಲಿ ನೆರವೇರುತ್ತಿದೆ.
ಡಿ.17 ರವರೆಗೆ ದೀಪಾರಾಧನೆಯು ನಡೆಯಲಿದೆ. ಅಂದು ಕಾರ್ತಿಕೋತ್ಸವದ ಮಂಗಲವನ್ನು ಸಾಮೂಹಿಕವಾಗಿ ಸಂಜೆ 6 ಗಂಟೆಗೆ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾಸಮಿತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಮಲ್ಹಾರರಾವ ಗಾರಂಪಳ್ಳಿ ಮತ್ತು ಕಾರ್ಯದರ್ಶಿ ರಾಘವೇಂದ್ರ ವಕೀಲ ಅವರು ತಿಳಿಸಿದ್ದಾರೆ.
