ಉದಯವಾಹಿನಿ, ಕೆಂಗೇರಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೆಮ್ಮಿಗೆಪುರ ವಾರ್ಡ್ ನ್ಯಾಯಾಂಗ ಬಡಾವಣೆಯಲ್ಲಿ ಸಿಮೆಂಟ್ ಮಿಕ್ಸರ್ ವಾಹನಗಳ ಹಾವಳಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ತಲಘಟ್ಟಪುರ ಸಮೀಪದ ನ್ಯಾಯಾಂಗ ಬಡಾವಣೆಗೆ ಹೋಗುವ ರಸ್ತೆಯಲ್ಲಿ ಹೆಚ್ಚಾಗಿ ಸಿಮೆಂಟ್ ಮಿಕ್ಸರ್ ವಾಹನಗಳು ಚಲಿಸುತ್ತಿರುವ ಪರಿಣಾಮ ಅಲ್ಲಿನ ರಸ್ತೆ ಯುದ್ಧಕ್ಕೂ ಸಿಮೆಂಟ್ ಮಿಕ್ಸರ್ ನ ಜಲ್ಲಿಗಳು ರಸ್ತೆಯ ಮೇಲೆ ಬೀಳುವ ಪರಿಣಾಮದಿಂದಾಗಿ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಓಡಾಡ ದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಮೇಲೆ ಬಿದ್ದಿರುವ ಸಿಮೆಂಟ್ ಜಲ್ಲಿ ಕಲ್ಲುಗಳ ಮೇಲೆ ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸುವ ಅನಿವಾರ್ಯ ಪರಿಸ್ಥಿತಿ ಒದಗಿ ಬಂದಿದೆ. ದ್ವಿಚಕ್ರ ವಾಹನ ಸವಾರರು ಜಲ್ಲಿಗಳ ಮೇಲೆ ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುವಸಾದ್ಯತೆ ಹೆಚ್ಚಿದೆ.
