ಉದಯವಾಹಿನಿ, ಬೆಳಗಾವಿ: ರಾಜಧಾನಿ ಬೆಂಗಳೂರಿನಿಂದ ಬೀದರ್ ಜಿಲ್ಲೆಗೆ ಹವಾನಿಯಂತ್ರಿತ ಸ್ಲೀಪರ್ ಕೋಚ್ ಬಸ್ ಸೇವೆ ಆರಂಭಿಸ ಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿಂದು ಬಿಜೆಪಿ ಸದಸ್ಯ ಅರವಿಂದ ಕುಮಾರ್ ಅರಳಿ ಪ್ರಶ್ನೆಗೆ ಉತ್ತರಿಸಿದ ಅವರು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಬೆಂಗಳೂರು- ಹೈದರಾಬಾದ್-ಬೀದರ್ ಮಾರ್ಗದಲ್ಲಿ ಐರಾವತ ಕ್ಲಬ್ ಕ್ಲಾಸ್ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಸಾರಿಗೆಗೆ ನೇರ ಪ್ರಯಾಣಿಕರ ಕೊರತೆಯಿಂದಾಗಿ ಸಾರಿಗೆಯು ನಷ್ಟದಲ್ಲಿ ಕಾರ್ಯಾಚರಣೆ ಆಗುತ್ತಿದ್ದುದರಿಂದ ಪ್ರಯಾಣಿಕರ ಬೇಡಿಕೆಯನುಸಾರ ಮುಂಗಡ ಆಸನ ಕಾಯ್ದಿರಿಸುವ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ವಾರಾಂತ್ಯ ಹಬ್ಬ, ಹರಿ ದಿನಗಳಲ್ಲಿ ಮಾತ್ರ ಬಸ್ ಸೇವೆ ನೀಡಲಾಗುತ್ತಿತ್ತು. ಸದಸ್ಯರ ಬೇಡಿಕೆ ಅನುಸಾರ ಎಸಿ ಸ್ಲೀಪರ್ ಬಸ್ ಸೇವೆ ಒದಗಿಸಲಾಗುವುದು.
