ಉದಯವಾಹಿನಿ, ಮಂಡ್ಯ: ರಾಜ್ಯ ಸರ್ಕಾರವು ಕೆಆರ್‌ಎಸ್‌ ಅಣೆಕಟ್ಟೆಯಿಂದ ಕಾವೇರಿ ನದಿಗೆ ನೀರು ಹರಿಸುವ ಬದಲಿಗೆ ನಾಲೆಗಳ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಮ್‌ ಆರೋಪಿಸಿದರು.ಕಾವೇರಿ ನೀರಾವರಿ ಸಮಿತಿ ತೀರ್ಮಾನದಂತೆ ಈ ಸಾಲಿನಲ್ಲಿ ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದ ರೈತರಿಗೆ ಕಟ್ಟು ಪದ್ಧತಿಯಂತೆ 4 ಕಟ್ಟು ನೀರು ಕೊಡಬೇಕಿತ್ತು.ನ.24ರಿಂದಲೇ ಕಾಲುವೆಗಳಲ್ಲಿ ನೀರು ನಿಲ್ಲಬೇಕಿತ್ತು. ಆದರೆ ನಂತರದ 18 ದಿನವೂ ಕಾಲುವೆಗಳಲ್ಲಿ ನಿರಂತರವಾಗಿ ನೀರು ಹರಿದಿದೆ. ಈ ಭಾಗದಲ್ಲಿ ಭತ್ತ ಕಟಾವು ನಡೆದಿದ್ದು, ಹೆಚ್ಚಿನ ರೈತರಿಗೆ ನೀರಿನ ಅಗತ್ಯ ಇಲ್ಲದೇ ಇದ್ದರೂ, ಕಾಲುವೆಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ. ಈ ನೀರು ತಮಿಳುನಾಡಿನತ್ತ ಹರಿದಿದೆ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.ಕಾವೇರಿ ನೀರು ಸಂರಕ್ಷಣೆ ವಿಷಯದಲ್ಲಿ ಹಿತರಕ್ಷಣಾ ಸಮಿತಿಯು ನಿರಂತರ ಹೋರಾಟ ಹಾಗೂ ಪತ್ರಗಳ ಮೂಲಕ ಸರ್ಕಾರವನ್ನು ಎಚ್ಚರಿಸುತ್ತಲೇ ಬಂದಿದೆ. ಈ ವಿಚಾರವಾಗಿ ಚರ್ಚಿಸಲು ಎರಡು ದಿನಗಳ ಜಂಟಿ ಅಧಿವೇಶನವನ್ನು ಕರೆಯಲು ಒತ್ತಾಯಿಸಲಾಗಿತ್ತು. ಆದರೆ ಈಗ ನಡೆದಿರುವ ಬೆಳಗಾವಿ ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆಗಳು ನಡೆದಿಲ್ಲ. ಅನಗತ್ಯ ವಿಷಯಗಳ ಚರ್ಚೆ ನಡೆಸುತ್ತ ಕಾವೇರಿ ವಿಚಾರಕ್ಕೆ ಒತ್ತು ನೀಡದೇ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!