ಉದಯವಾಹಿನಿ, ಹುಬ್ಬಳ್ಳಿ: ತಾವು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷ ಬಿಡುವುದೂ ಇಲ್ಲ, ಕೆ.ಎಸ್.ಈಶ್ವರಪ್ಪನವರನ್ನು ಭೇಟಿಯಾಗುವ ಅವಶ್ಯಕತೆಯೂ ಇಲ್ಲ ಎಂದು ನುಡಿದರು.
ಪಕ್ಷ ಬಿಟ್ಟುಹೋಗುವವರನ್ನು ಈಶ್ವರಪ್ಪ ತಮ್ಮ ಮಾತುಗಳಿಂದ ದಾರಿತಪ್ಪಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.
`ಒಂದು ಸಣ್ಣ ಎಂ.ಎಲ್.ಎ. ಟಿಕೆಟ್’ ಎಂಬುದು ಈಶ್ವರಪ್ಪ ಹೇಳಿಕೆ. ಆದರೆ ಆ ಟಿಕೆಟ್ ಕೊಡಿಸೋಕೂ ಅವರಿಗೆ ಆಗಲಿಲ್ಲ, ಅವರಿಗೂ ಅದು ಸಿಗಲಿಲ್ಲ ಎಂದು ಶೆಟ್ಟರ್ ಹರಿಹಾಯ್ದರು.
ಸಿದ್ಧಾಂತ ಮಾತನಾಡುವುದನ್ನು ಈಶ್ವರಪ್ಪ ಬಿಟ್ಟುಬಿಡಬೇಕು, ಕರ್ನಾಟಕ ಬಿಜೆಪಿ ಉದ್ಧಾರ ಆಗುವುದು ಸಾಧ್ಯವಿಲ್ಲ ಎಂದು ಅವರು ಹೇಳಿದರು.ಸಂಸತ್ ಭವನದಲ್ಲಿ ಭದ್ರತಾ ಲೋಪ ನಡೆದಿದ್ದು ಖಂಡನೀಯ, ಈ ರೀತಿ ಘಟನೆನಡೆಯಬಾರದು ಎಂದು ಅವರು ಹೇಳಿದರು.
