ಉದಯವಾಹಿನಿ, ವಿಜಯಪುರ: ಭಾರತದಲ್ಲಿ, ಡಿ.14 ಅನ್ನು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನಾಗಿ ಗುರುತಿಸಲಾಗಿದ್ದು, ಇಂಧನ ದಕ್ಷತೆ ಮತ್ತು ಸಂರಕ್ಷಣೆಯಲ್ಲಿನ ಸಾಧನೆಗಳನ್ನು ಗುರುತಿಸಲು ಮತ್ತು ಆಚರಿಸಲು ಮೀಸಲಾಗಿರುವ ದಿನ. ಶಕ್ತಿಯ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಅದನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಇಂಧನ ಉಳಿತಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.
ಬಳಕೆಯಲ್ಲಿಲ್ಲದಿದ್ದಾಗ ದೀಪಗಳು ಮತ್ತು ಉಪಕರಣಗಳನ್ನು ಆಫ್ ಮಾಡಿ. ಉಳಿಸಿದ ಶಕ್ತಿಯು ಗಳಿಸಿದ ಶಕ್ತಿಯಾಗಿದೆ. ಶಕ್ತಿಯ ಸಂರಕ್ಷಣೆ ನಮ್ಮ ಪರಿಸರವನ್ನು ಸಹ ರಕ್ಷಿಸುತ್ತದೆ. ಉತ್ತಮ ನಾಳೆಗಾಗಿ, ಇಂದು ಶಕ್ತಿಯನ್ನು ಉಳಿಸಿ. ಶಕ್ತಿಯನ್ನು ಉಳಿಸಿ, ಹಣವನ್ನು ಉಳಿಸಿ, ರಾಷ್ಟ್ರವನ್ನು ಉಳಿಸಿ, ಗ್ರಹವನ್ನು ಉಳಿಸಿ. ಭವಿಷ್ಯದ ಸಂತೋಷಕ್ಕಾಗಿ ವಿದ್ಯುತ್ ಉಳಿಸಿ-ಎಂಬ ಅನೇಕ ಇಂಧನ ಸಂರಕ್ಷಣೆಯ ಘೋಷಣೆಗಳನ್ನು ತಾಲೂಕಿನ ನಾಗಠಾಣ ಗ್ರಾಮದ ಅನುಶ್ರೀ-ಶ್ರೀನಿಧಿ ಬಂಡೆ ಅವರು ಪ್ರದರ್ಶಿಸಿ, ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಮಹತ್ವವನ್ನು ತೋರಿಸಿದರು.
