ಉದಯವಾಹಿನಿ, ಮಾಲೂರು: ಗ್ರಾಮಕ್ಕೆ ದೇವಾಲಯ ಎಷ್ಟು ಮುಖ್ಯವೋ ಶಾಲೆಯು ಅಷ್ಟೆ ಮುಖ್ಯ. ಶಾಲೆಯ ಅಭಿವೃದ್ಧಿಗಾಗಿ ಸಮುದಾಯವು ಪಾಲ್ಗೊಂಡು ಅಗತ್ಯವಿರುವ ಮೂಲಭೂತ ಸವಲತ್ತುಗಳು ಒದಗಿಸಿದಾಗ ಮಕ್ಕಳ ಶೈಕ್ಷಣಿಕ ಸರ್ವತೋಮುಖ ಪ್ರಗತಿ ಸಾಧ್ಯ ಎಂದು ಮಾಲೂರು ಪಟ್ಟಣದ ಮಾರಿಕಾಂಬ ದೇವಾಲಯ ಸಮಿತಿಯ ಅಧ್ಯಕ್ಷ .ಪಿ.ವೆಂಕಟೇಶ್ ತಿಳಿಸಿದರು.
ಅವರು ತಾಲೂಕಿನ ಶಿವಾರ ಪಟ್ಟಣ ಸಿ.ಆರ್.ಸಿ ವ್ಯಾಪ್ತಿಯ ಕರಿನಾಯಕನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾರಿಕಾಂಬ ದೇವಾಲಯ ಟ್ರಸ್ಟ್ ವತಿಯಿಂದ ಶಾಲೆಗೆ ದಾನವಾಗಿ ನಿರ್ಮಿಸಿ ಕೊಟ್ಟಿರುವ ಶುದ್ಧ ಕುಡಿಯುವ ನೀರಿನ ಪಿಲ್ಟರ್ ವಿತರಿಸಿದರು.
ಮಾರಿಕಾಂಬ ದೇವಾಲಯ ಟ್ರಸ್ಟ್ ಭಕ್ತಾದಿಗಳು ಹುಂಡಿಗೆ ನೀಡಿರುವ ಹಣವನ್ನು ದೇವಾಲಯದ ವತಿಯಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಸಮಾಜ ಕಾರ್ಯಕ್ಕೆ ಬಳಸುತ್ತಿತ್ತು ಈಗಾಗಲೇ ಪಟ್ಟಣದಲ್ಲಿ ಕೆಲವು ವಾರ್ಡುಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಪುರಸಭೆಯು ನೀಡುವ ನೀರನ್ನು ಶುದ್ಧೀಕರಿಸಿ ಶುದ್ಧ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣದ ಮಧ್ಯಮ ವರ್ಗದವರ ಗುಣಾತ್ಮಕ ಶಿಕ್ಷಣಕ್ಕಾಗಿ ಕುಂಬಾರಪೇಟೆಯಲ್ಲಿ ಶಿಥಿಲಗೊಂಡಿದ್ದ, ಸರ್ಕಾರಿ ಶಾಲೆಯನ್ನು ತೆರವು ಗೊಳಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ.
