ಉದಯವಾಹಿನಿ, ಕೋಲಾರ: ನಗರದ ಹೊರವಲಯದ ಬೆಂಗಳೂರು – ಚೆನ್ನೈ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಸಂಚಾರವನ್ನು ದಟ್ಟನೆಯನ್ನು ಸುಗಮಗೊಳಿಸುವ ದೆಸೆಯಲ್ಲಿ ಸರ್ವಿಸ್ ರಸ್ತೆಗಳನ್ನು ಸರ್ಕಾರವು ಮಾಡುವ ಮೂಲಕ ಸಾರ್ವಜನಿಕರಿಗೆ ಅನುವು ಮಾಡಿದೆ. ಅದರೆ ನಮ್ಮ ನಗರಸಭೆಯವರು ನಗರದಲ್ಲಿನ ತ್ಯಾಜ್ಯವನ್ನು ತುಂಬಿ ಕೊಂಡು ಹೋಗಿ ಸರ್ವಿಸ್ ರಸ್ತೆ ಬದಿಯ ಪಾದಚಾರಿ ರಸ್ತೆಗಳಲ್ಲಿ ಸುರಿಯುತ್ತಿರುವುದರಿಂದ ಸಮೀಪದ ಬಡಾವಣೆಗಳಿಗೆ ಹಾಗೂ ವಾಹನ ಸಂಚಾರದ ಸಂದರ್ಭದಲ್ಲಿ ಈ ರಸ್ತೆಯಲ್ಲಿ ತ್ಯಾಜ್ಯ ರಾಶಿಯ ದುರ್ವಾಸನೆಯಿಂದ ಕೊಡಿರುತ್ತದೆ. ಈ ರಸ್ತೆಯಲ್ಲಿ ಬೆಳಗ್ಗೆ ಮತ್ತು ಸಂಜೆ ವಾಯುವಿಹಾರ ಮಾಡುವವರಿಗೆ ಈ ತ್ಯಾಜ್ಯರಾಶಿಯಿಂದ ಅಡಚಣೆಯಾಗುತ್ತಿದೆ. ಇಷ್ಟೆ ಅಲ್ಲದೆ ತ್ಯಾಜ್ಯ ರಾಶಿಗೆ ಬೆಂಕಿ ಹಚ್ಚಿ ವಾಯು ಮಾಲಿನ್ಯ ಮಾಡುತ್ತಿರುವುದರಿಂದ ಇನ್ನಷ್ಟು ಸಾರ್ವಜನಿಕರಿಗೆ ತೊಂದರೆಗಳಾಗುತ್ತಿದೆ. ಅದರೆ ಕನಿಷ್ಟ ಪ್ರಜ್ಞೆಯು ಇಲ್ಲದೆ ನಗರಸಭೆ ಅಧಿಕಾರಿಗಳು ಇದು ಗಮನಕ್ಕೆ ಬಂದರೂ ನಿರ್ಲಕ್ಷಿಸಿರುವುದು ಅವರ ಕರ್ತವ್ಯದ ಬಗ್ಗೆ ಜವಾಬ್ದಾರಿ ಇಲ್ಲದಿರುವುದಕ್ಕೆ ನಿದರ್ಶನವಾಗಿದೆ. ಸಾರ್ವಜನಿಕರಿಂದ ಪ್ರತಿ ವರ್ಷ ಕಸ ಸ್ವಚ್ಛತೆ ಮತ್ತು ವಿಲೇವಾರಿಗೆಂದು ನೂರಾರು ರೂಪಾಯಿ ವಸೂಲಿ ಮಾಡುವ ಮೂಲಕ ವಂಚಿಸಲಾಗುತ್ತಿದೆ ಎಂದು ದೂರಿದ್ದಾರೆ.
