ಉದಯವಾಹಿನಿ, ಚಿಟಗುಪ್ಪ: ಪಟ್ಟಣದ ಗಾಂಧಿ ವೃತ್ತದ ಬಳಿ ಇರುವ ಎಸ್ ಬಿ ಐ ಬ್ಯಾಂಕ್ ಕೆಳಗೆ ಇರುವ ಎಟಿಎಂನಲ್ಲಿ ಕಳ್ಳರು ಕೈಚಳಕ ತೋರಿಸಿ ಲಕ್ಷಾಂತರ ರೂಪಾಯಿಗಳನ್ನು ಕಳುವು ಮಾಡಿಕೊಂಡು ಹೋದ ಘಟನೆ ಜರುಗಿದೆ.
ಪಟ್ಟಣದ ಗಾಂಧಿ ವ್ರತ್ತದಿಂದ ಭವಾನಿ ಮಂದಿರಕ್ಕೆ ಹೋಗುವ ರಸ್ತೆಯಲ್ಲಿ ರುವ ಬ್ಯಾಂಕ್ ನ ಕೆಳಗಡೆ ಇರುವ ಎಟಿಎಂ ಕಳ್ಳತನವಾಗಿದೆ. ಎಟಿಎಂ ನಲ್ಲಿ 7 ಲಕ್ಷಕ್ಕೂ ಅಧಿಕ ಹಣವಿತ್ತು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೆÇಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು ಚಿಟಗುಪ್ಪ ಪೆÇಲೀಸ್ ಠಾಣೆಯಲ್ಲಿ ಪ್ರಕÀರಣ ದಾಖಲಾಗಿದೆ.
