ಉದಯವಾಹಿನಿ, ಕಮಲನಗರ: ತಾಲ್ಲೂಕಿನ ತೋರಣಾ ಗ್ರಾಮದಲ್ಲಿರುವ
ಎಸ್ ಬಿ ಐ ಶಾಖೆಯ ಬ್ಯಾಂಕಿನ ಹಿಂಬದಿಯ ಕಿಟಕಿ ಒಡೆದು ಬ್ಯಾಂಕಿನ ಲಾಕರ್ ದಲ್ಲಿದ್ದ ನಗದು ಹಣ 18,63,793 ಲಕ್ಷ ರೂಪಾಯಿ ಹಣ ದೋಚಿ ಪರಾರಿಯಾದ ಘಟನೆ ಬುಧವಾರ ತಡರಾತ್ರಿ ಜರುಗಿದೆ.
ಬ್ಯಾಂಕ್ ದರೋಡೆಕೋರರು ಕಳವು ಮಾಡಲು ಗ್ಯಾಸ್ ಸಿಲೆಂಡರ್ ಬಳಸಿ ಹಾಗೂ ಕಿಟಕಿಯ ಸಲಾಕೆಗಳನ್ನು ಕತ್ತರಿಸಿ ಒಳ ನುಗ್ಗಿ ಸಿಸಿ ಕ್ಯಾಮೆರಾವನ್ನು 12: 55 ನಿಮಿಷಕ್ಕೆ ನಿಲ್ಲಿಸಿದ್ದಾರೆ ಎಂದು ಬ್ಯಾಂಕಿನ ವ್ಯವಸ್ಥಾಪಕ ಭರತ್ ಕುಮಾರ್ ಬಿ ತಿಳಿಸಿರುತ್ತಾರೆ.
ಬ್ಯಾಂಕಿನ ಪಕ್ಕದಲ್ಲಿರುವ ಎ ಟಿ ಎಂ ನಲ್ಲಿ ಸುಮಾರು 28 ಲಕ್ಷ ರೂಪಾಯಿ ಇದ್ದವು ಅಲ್ಲಿ ಕೂಡಾ ದರೋಡೆ ಮಾಡಲು ಯತ್ನಿಸಿದ್ದಾರೆ ಆದರೆ ಅದು ವಿಫಲವಾಗಿದೆ ಎಂದು ಮಹೇಶ ಮೇಘಣ್ಣನವರ ಹೆಚ್ಚುವರಿ ಪೆÇಲೀಸ್ ಅಧೀಕ್ಷಕರು ಬೀದರರವರು ತಿಳಿಸಿದ್ದಾರೆ.
ಬಿದರನಿಂದ ಶ್ವಾನ ದಳದ ರಾಜಕುಮಾರ್ ಅವರ ತಂಡ ಜಿಲ್ಲೆಯ ಅಪರಾಧ ತಂಡದ ಸಿಬ್ಬಂದಿ ವರ್ಗದವರು
ಆಗಮಿಸಿ ಪರೀಶೀಲನೆ ನಡೆಸಿದ್ದರು.
