ಉದಯವಾಹಿನಿ, ಇಂಡಿ : ತಾಲೂಕಿನ ಸಾಲೋಟಗಿ ಗ್ರಾಮದ ಸೋಮನಾಥ ಅಶೋಕ ಆಲಮೇಲ ( 36) ಕೊಲೆ ಯಾಗಿದ್ದಾನೆ.
ಮೃತನ ತಂದೆ ಅಶೋಕ ಮಹಾಂತಪ್ಪ ಆಲಮೇಲ ಮತ್ತು ಅಶೋಕನ ಅಣ್ಣನ ಮಗ ಗಡ್ಡೆಪ್ಪ ಚನ್ನಪ್ಪ ಆಲಮೇಲ ಕೂಡಿ ಬಡಿಗೆ ಮತ್ತು ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾರೆ.
ಬುಧವಾರ ಸಾಯಂಕಾಲ ಈ ಘಟನೆ ಸಾಲೋಟಗಿ ಗ್ರಾಮದ ಬಸವೇಶ್ವರ ವೃತ್ತದ ಹಿಟ್ಟಿನ ಗಿರಣಿ ಹತ್ತಿರ ನಡೆದಿದ್ದು ಸ್ಥಳಕ್ಕೆ ಎ.ಎಸ್.ಐ ಎಸ್.ಎಸ್.ತಳವಾರ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು ಈ ಕುರಿತು ಇಂಡಿಯ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
