ಉದಯವಾಹಿನಿ, ಭಾಲ್ಕಿ:ತಾಲೂಕಿನ ಭಾಗ್ಯನಗರ ಗ್ರಾಮದಲ್ಲಿ ಡಿ.12 ರಂದು ಬೀರಗೊಂಡೇಶ್ವರರ 21ನೆಯ ಜಾತ್ರೆ ಮತ್ತು ಭಕ್ತ ಕನಕದಾಸರ 536ನೆಯ ಜಯಂತ್ಯುತ್ಸವ ಸಮಾರಂಭ ಜರುಗಲಿದೆ ಎಂದು ಯುವ ಮುಖಂಡ ಕೆ.ಡಿ.ಗಣೇಶ ತಿಳಿಸಿದ್ದಾರೆ. ಗ್ರಾಮದ ಭಾಗ್ಯನಗರ ಗ್ರಾಮದಲ್ಲಿ ಗುರುವಾರ ಜಾತ್ರಾ ಮಹೋತ್ಸವದ ವಾಲ್‍ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಾತ್ರಾ ಮಹೋತ್ಸವದಲ್ಲಿ ಮಲ್ಲಯ್ಯಗಿರಿ ಆಶ್ರಮದ ಡಾ.ಬಸವಲಿಂಗ ಅವಧೂತರು ಪ್ರವಚನದ ಮೂಲಕ ಜ್ಞಾನ ದಾಸೋಹ ಉಣಬಡಿಸಲಿದ್ದಾರೆ. ವಿವಿಧ ಮಠಾಧೀಶರು, ಗಣ್ಯರು ಈ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಸುತ್ತಮೂತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರಾ ಮಹೋತ್ಸವಕ್ಕೆ ಕಳೆ ತಂದು ಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸೋಮನಾಥ ಮುದಾಳೆ, ಬಾಬುರಾವ ರಾಯಗೊಂಡ, ಗಣಪತಿ ಕುಮಾರಚಿಂಚೋಳೆ, ಲೋಕೇಶ ಕುಮಾರಚಿಂಚೋಳೆ, ವೀರಪ್ಪ ಘೋಗ್ಗೆ, ಪಂಡಿತ ಮುದಾಳೆ, ದಶರಥ ಹಿಪ್ಪಳಗಾಂವೆ, ಬಾಬು ಜಾಬಾಡೆ, ರಮೇಶ ದುಬಲಗುಂಡೆ ಸೇರಿದಂತೆ ಮುಂತಾದವರು ಇದ್ದರು.
