ಉದಯವಾಹಿನಿ, ಶಿವಮೊಗ್ಗ: ಗೂಂಡಾಗಿರಿ ವರ್ತನೆ ಮಾಡುವುದು ಎಳ್ಳಷ್ಟೂ ಸರಿಯಲ್ಲ ,ಅಧಿಕಾರ ಶಾಶ್ವತವಲ್ಲ ಎಂದು ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ .
ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಶಾಸಕರಿಂದಲೇ ಹಲ್ಲೆ ನಡೆದಿದೆ. ದಾಳಿಗೂ ಮುನ್ನ ಕಾರಿಗೆ ಹಾನಿ ಮಾಡಿದ್ದಾರೆ .ದಾಳಿಕೋರರನ್ನು ಇನ್ನೂ ಬಂಧಿಸಿಲ್ಲ. ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಿಡಿಗೇಡಿಗಳು ಭದ್ರಾವತಿಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಮಟ್ಕಾ, ಜೂಜು, ಕಾರ್ಡ್ ದಂಧೆ ನಡೆಯುತ್ತಿದೆ. ಗೋಕುಲ್ ಕೃಷ್ಣನ್ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿದೆ. ಅಧಿಕಾರ ಶಾಶ್ವತವಲ್ಲ, ಗೂಂಡಾಗಿರಿ ಮಾಡುವುದು ಸರಿಯಲ್ಲ ಎಂದು ಮುಖಂಡರ ವಿರುದ್ಧ ಕೈ ಗುಡುಗಿದ್ದಾರೆ.
ರಾಜಕೀಯ ಮಾಡಲು ಕಾರ್ಯಕರ್ತರು ಇದ್ದಾರೆ. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯಬಾರದು. ಸಮವಸ್ತ್ರಕ್ಕೆ ಮರ್ಯಾದೆ ನೀಡುವ ಕೆಲಸ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಡಿದ ಒಳ್ಳೆಯ ಕೆಲಸದ ಮೇಲೆ ನಮ್ಮ ಭವಿಷ್ಯ ನಿರ್ಧಾರವಾಗಲಿದೆ .ಗೂಂಡಾಗಿರಿ ನಡೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಪ್ರಧಾನಿ ಮೋದಿಯನ್ನು ಶನಿ ಎಂದು ರಾಹುಲ್ ಗಾಂಧಿ ಕರೆದಿದ್ದಾರೆ. ಮೂರನೇ ವರ್ಗ ಎಂಬ ಪದವನ್ನು ಹಿಂದುಳಿದ ವರ್ಗದ ನಾಯಕನಿಗೆ ಬಳಸಿದ್ದಾರೆ.ಸುಳ್ಳು ಆರೋಪ ಮಾಡುವ ಮೂಲಕ ದಾರಿ ತಪ್ಪಿಸಬಾರದು ಎಂದಿದ್ದಾರೆ.ಇಡೀ ಜಿಲ್ಲೆಯ ಭದ್ರಾವತಿಯಲ್ಲಿ ಜೂಜು, ಮಟ್ಕಾ, ಕಾರ್ಡ್ ಗಳ ದಂಧೆ ಜೋರಾಗಿ ನಡೆಯುತ್ತಿದೆ. ಕೆಲ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೆಲ ಅಧಿಕಾರಿಗಳು ಇಂತಹ ಕೃತ್ಯಕ್ಕೆ ಷಡ್ಯಂತ್ರ ಮಾಡುತ್ತಿದ್ದಾರೆ. ಇಂತಹ ಕೆಟ್ಟ ರಾಜಕಾರಣ ಶಿವಮೊಗ್ಗದಲ್ಲಿ ಯಾವಾಗಲೂ ನಡೆದಿಲ್ಲ ಎಂದರು. ಸಂಸತ್ತಿನಲ್ಲಿ ಇದು ಬಹಳ ಗಂಭೀರವಾದ ವಿಷಯವಾಗಿದೆ. ೩-೪ ಮಂದಿ ಎರಡು ಮೂರು ತಿಂಗಳಿಂದ ಅಣಕು ಪ್ರಯೋಗ ಮಾಡಿದ್ದಾರೆ. ವಿದ್ಯಾವಂತರಿದ್ದಾರೆ, ಇಂತಹ ಕೆಟ್ಟ ಕೆಲಸ ಮಾಡಲು ಕಾರಣವೇನು. ಎಲ್ಲವೂ ತನಿಖೆಯಿಂದ ಹೊರಬರಲಿದೆ. ನಾನೇ ಆದರೂ ಕರ್ನಾಟಕದವರು ಅಂದರೆ ದೆಹಲಿಯಲ್ಲಿ ಹೆಚ್ಚು ಪ್ರೀತಿ. ಹೀಗಾಗಿ ಸಹಜವಾಗಿ ಮೈಸೂರಿನವರು ಎಂದು ಪಾಸ್ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
